ಮಕ್ಕಳ ರೋಗ ಗುಣಪಡಿಸಲು ಕಿಡ್ನಿ ಮಾರಲು ಮುಂದಾದ ತಂದೆ (ಫೋಟೋ ಕೃಪೆ: ಕವರ್ ಏಷ್ಯಾ ಪ್ರೆಸ್) 
ದೇಶ

ಮಕ್ಕಳ ರೋಗ ಗುಣಪಡಿಸಲು ಕಿಡ್ನಿ ಮಾರಲು ಮುಂದಾದ ತಂದೆ

ಗುಜರಾತ್ ನಲ್ಲಿರುವ ಹಳ್ಳಿಯ ಬಡ ಕುಟುಂಬದಲ್ಲಿ ಹುಟ್ಟಿದ ಈ ಮಕ್ಕಳು ಸ್ಥೂಲಕಾಯ ಖಾಯಿಲೆಯಿಂದ ಬಳಲುತ್ತಿದ್ದಾರೆ. ಮಕ್ಕಳ ಚಿಕಿತ್ಸೆ ನೀಡಲು ಹಣವಿಲ್ಲದ ಕಾರಣ ಈ ಮಕ್ಕಳ ತಂದೆ ರೋಗ ಗುಣಪಡಿಸವ ಸಲುವಾಗಿ ತನ್ನ ಕಿಡ್ನಿಯನ್ನೇ ಮಾರಲು ಮುಂದಾಗಿದ್ದಾರೆ...

ಗುಜರಾತ್: ಗುಜರಾತ್ ನಲ್ಲಿರುವ ಹಳ್ಳಿಯ ಬಡ ಕುಟುಂಬದಲ್ಲಿ ಹುಟ್ಟಿದ ಈ ಮಕ್ಕಳು ಸ್ಥೂಲಕಾಯ ಖಾಯಿಲೆಯಿಂದ ಬಳಲುತ್ತಿದ್ದಾರೆ. ಮಕ್ಕಳ ಚಿಕಿತ್ಸೆ ಕೊಡಿಸಲು ಸಾಧ್ಯವಾಗದ ಈ ನಿಸ್ಸಾಹಕ ತಂದೆ ಇದೀಗ ಮಕ್ಕಳ ರೋಗ ಗುಣಪಡಿಸುವ ಸಲುವಾಗಿ ತನ್ನ ಕಿಡ್ನಿಯನ್ನೇ ಮಾರಲು ಮುಂದಾಗಿದ್ದಾರೆ.

ಗುಜರಾತ್ ಮೂಲದ ರಮೇಶ್ ಬಾಯಿ ಎಂಬುವವರು ದಿನಗೂಲಿ ಮಾಡಿಕೊಂಡು ಬದುಕು ಸಾಗಿಸುತ್ತಿರುವ ವ್ಯಕ್ತಿ. ರಮೇಶ್ ಬಾಯಿ ಅವರ ಪತ್ನಿ ಪ್ರಜ್ಞಾ ಬೆನ್. ಈ ಇಬ್ಬರು ದಂಪತಿಗಳಿಗೆ 4 ಮಕ್ಕಳಿದ್ದಾರೆ. ಮೊದಲನೇ ಮಗಳು ಭವಿತಾ. ಮೊದಲು ಹುಟ್ಟಿದ ಮಗು ಭವಿತಾಳಿಗೆ ಈ ರೀತಿಯ ಯಾವುದೇ ಸಮಸ್ಯೆ ಕಂಡುಬರದಿದ್ದರೂ ಹುಟ್ಟಿದಾಗ ತೂಕ ಕಡಿಮೆ ಇದ್ದಾಳೆ ಎಂದು ವೈದ್ಯರು ಹೇಳಿದ್ದರಂತೆ. ಇದೀಗ ಭವಿತಾ ಸಂಪೂರ್ಣವಾಗಿ ಆರೋಗ್ಯವಾಗಿದ್ದಾಳೆ.

ಈಕೆ ನಂತರ ಹುಟ್ಟಿದ ಯೋಗಿತಾ, ಅನಿಷಾ ಹಾಗೂ ಹರ್ಷ್ ಎಂಬ ಮೂರು ಮಕ್ಕಳಿಗೂ ಸ್ಥೂಲಕಾಯ ರೋಗ ಬಂದಿದೆ. ಹುಟ್ಟಿದ 1 ವರ್ಷದ ನಂತರ ಮಕ್ಕಳಿಗೆ ಇದ್ದಕ್ಕಿದ್ದಂತೆ ಈ ಖಾಯಿಲೆ ಬಂದಿದೆ.

5 ವರ್ಷದ ಯೋಗಿತಾ 48 ಕೆ.ಜಿ, 3 ವರ್ಷದ ಅನಿಷಾ 34 ಕೆ.ಜಿ ಹಾಗೂ 18 ತಿಂಗಳ ಹರ್ಷ್ 15 ಕೆ.ಜಿ ತೂಕ ಹೊಂದಿದ್ದಾರೆ. ಈ ಮೂವರು ಮಕ್ಕಳ ಆಹಾರಕ್ಕೆ ಪ್ರತಿ ತಿಂಗಳು 10 ಸಾವಿರ ರುಪಾಯಿಗಳು ಖರ್ಚು ಬರುತ್ತದೆ. ದಿನಗೂಲಿ ಮಾಡುವ ರಮೇಶ್ ಬಾಯಿಗೆ ಎಷ್ಟೇ ದುಡಿಯುತ್ತೇನೆ ಎಂದರೂ ತಿಂಗಳಿಗೆ 3000 ರುಪಾಯಿಗಳು ಬರುತ್ತದ್ದಂತೆ. ಹಾಗೋ ಹೀಗೋ ಅಲ್ಲಿ ಇಲ್ಲಿ ಕೆಲಸ ಮಾಡಿ ಸಹೋದರ ಹಾಗೂ ಗೆಳಯರೊಂದಿಗೆ ಹಣ ಪಡೆದು ಮಕ್ಕಳ ಆಹಾರಕ್ಕೆ ಹಣ ಹೊಂದಿಸುತ್ತಾರಂತೆ.

ಇಷ್ಟಕ್ಕೂ 5 ವರ್ಷವೂ ದಾಟದ ಈ ಮಕ್ಕಳು ಅಂತಹದ್ದು ಏನು ತಿನ್ನುತ್ತಾರೆ ಅಂತಿರಾ...ಇಲ್ಲಿದೆ ಈ ಮಕ್ಕಳ ಆಹಾರ ಪಟ್ಟಿ...

  • ಬೆಳಗ್ಗೆ ಎದ್ದ ತಕ್ಷಣ ಈ ಮಕ್ಕಳು ಒಬ್ಬೊಬ್ಬರು 5 ಬಾಳೆಹಣ್ಣು, 6 ಚಪಾತಿ, 1ಲೀ. ಹಾಲು ಹಾಗೂ 1 ಕಪ್ ತರಕಾರಿ ತಿನ್ನುತ್ತಾರೆ.
  • 10 ನಂತರ ಮತ್ತೆ 5 ಚಪಾತಿ, 1 ಕಪ್ ಮೊಸರು, ತರಕಾರಿ ಸೂಪ್.
  • 12. 30 ಗಂಟೆಯ ನಂತರ  ಚಪಾತಿ, 2 ಬಾಳೆಹಣ್ಣು, 1.5 ಲೀಟರ್ ಮಜ್ಜಿಗೆ ಹಾಗೂ ತರಕಾರಿ ಪಲ್ಯ
  • ಸಂಜೆ 3 ಗಂಟೆಗೆ ರಾಗಿ ಬ್ರೆಡ್, ತರಕಾರಿಯೊಂದಿಗೆ 3 ಕಪ್ ಅನ್ನ
  • ಸಂಜೆ 5 ಗಂಟೆಗೆ 1 ಲೀಟರ್ ತಂಪು ಪಾನೀಯ (ಕೋಕಾ ಕೋಲಾ ಅಥವಾ ಪೆಪ್ಸಿ)
  • ಕರಿದ ಕುರುಕಲು ತಿಂಡಿ 6 ಪ್ಯಾಕೆಟ್, ಬಿಸ್ಕೆಟ್ 5 ಪ್ಯಾಕೆಟ್, ಐದು ಬಾಳೆಹಣ್ಣು
  • ರಾತ್ರಿ 8 ಗಂಟೆಗೆ, 6 ಚಪಾತಿ, 1 ಲೀಟರ್ ಹಾಲು, 1.5 ಲೀಟರ್ ಮಜ್ಜಿಗೆ, 2 ದೊಡ್ಡ ಬಟ್ಟಲಿನಲ್ಲಿ ತರಕಾರಿ
  • ಮಕ್ಕಳ ಈ ಪರಿಸ್ಥಿತಿಯನ್ನು ಕಂಡ ಪೋಷಕರು ತಿಳಿದ ಹಾಗೂ ಕೇಳಿದ ಎಲ್ಲಾ ಆಸ್ಪತ್ರೆಗಳಲ್ಲಾ ತಿರುಗಿ ಚಿಕಿತ್ಸೆ ಕೊಡಿಸಿದ್ದಾರೆ. ಆದರೂ ಈ ವರೆಗೂ ಯಾವುದೇ ರೀತಿಯಲ್ಲೂ ಗುಣಮುಖರಾಗುವ ಲಕ್ಷಣಗಳು ಕಂಡುಬಂದಿಲ್ಲ. ಮಕ್ಕಳ ಚಿಕಿತ್ಸೆಗಾಗಿ ಈಗಾಗಲೇ 50,000 ಸಾವಿರ ರುಪಾಯಿಗಳನ್ನು ಖರ್ಚು ಮಾಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

SCROLL FOR NEXT