ಹಡಗು ದುರಂತ 
ದೇಶ

ಲಿಬಿಯಾದಲ್ಲಿ ಮತ್ತೊಂದು ಹಡಗು ದುರಂತ: 700 ವಲಸಿಗರು ಜಲಸಮಾಧಿ

728ಕ್ಕೂ ಹೆಚ್ಚು ಲಿಬಿಯಾ ಅಕ್ರಮ ವಲಸಿಗರನ್ನು ಹೊತ್ತ ಬೃಹತ್‌ ಹಡಗೊಂದು ಮಧ್ಯ ಮೆಡಿಟೇರಿಯನ್‌ ಸಮುದ್ರದಲ್ಲಿ ದುರಂತಕ್ಕೀಡಾಗಿದ್ದು...

ರೋಮ್‌: 728ಕ್ಕೂ ಹೆಚ್ಚು ಲಿಬಿಯಾ ಅಕ್ರಮ ವಲಸಿಗರನ್ನು ಹೊತ್ತ ಬೃಹತ್‌ ಹಡಗೊಂದು ಮಧ್ಯ ಮೆಡಿಟೇರಿಯನ್‌ ಸಮುದ್ರದಲ್ಲಿ ದುರಂತಕ್ಕೀಡಾಗಿದ್ದು, ಪರಿಣಾಮ ಹಡಗಿನಲ್ಲಿದ್ದವರ ಪೈಕಿ 700 ಮಂದಿ ಜಲಸಮಾಧಿಯಾಗಿರುವ ಬಗ್ಗೆ ಅಂತರಾಷ್ಟ್ರೀಯ ಸುದ್ದಿ ಸಂಸ್ಥೆಗಳು ವರದಿಮಾಡಿವೆ.

ಕಳೆದ ರಾತ್ರಿ ಲಿಬಿಯಾ ಕರಾವಳಿಯಿಂದ 120 ಮೈಲಿ ದೂರದ ಲ್ಯಾಂಪೆಡುಸಾ ಎಂಬಲ್ಲಿ ಹಡಗು ದುರಂತಕ್ಕೀಡಾಗಿದ್ದು, 700 ಮಂದಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಇದೇ ವೇಳೆ 28 ಜನರನ್ನು ರಕ್ಷಿಸಲಾಗಿದೆ ಎಂದು ಹೇಳಲಾಗಿದೆ.

ಕಳೆದ ವಾರವಷ್ಟೇ ಲಿಬಿಯಾ ಕರಾವಳಿಯಲ್ಲಿ ಅಕ್ರಮ ವಲಸಿಗರನ್ನು ಕರೆದೊಯ್ಯುತ್ತಿದ್ದ ದೋಣಿಯೊಂದು ಮುಳುಗಿ 400 ಮಂದಿ ಸಾವನ್ನಪ್ಪಿರುವ ಘಟನೆ ಮಾಸುವ ಮುನ್ನವೇ ಅದೇ ರೀತಿಯ ಇನ್ನೊಂದು ಘೋರ ದುರಂತ ಸಂಭವಿಸಿದೆ.

ಆಂತರಿಕ ಸಂಘರ್ಷ, ಬಡತನದಿಂದ ಬೆಂದು ಹೋಗಿರುವ ಲಿಬಿಯಾ ಜನತೆ, ಯುರೋಪ್‌ ರಾಷ್ಟ್ರಗಳಿಗೆ ವಲಸೆ ಹೋಗುವುದು ಸಾಮಾನ್ಯ. ಮೆಡಿಟರೇನಿಯನ್‌ ವಲಯದಲ್ಲಿ ಇದೀಗ ಉತ್ತಮ ವಾತಾವರಣ ಇರುವ ಹಿನ್ನೆಲೆಯಲ್ಲಿ, ಅಕ್ರಮ ವಲಸಿಗರು, ಇದೇ ಸಂದರ್ಭವನ್ನು ಅಕ್ರಮ ಪ್ರಯಾಣಕ್ಕೆ ಬಳಸಿಕೊಳ್ಳುತ್ತಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಕ್ಕಿಂನಲ್ಲಿ ವರುಣನ ಆರ್ಭಟ: Rimbi ಗ್ರಾಮದಲ್ಲಿ ಭೀಕರ ಭೂಕುಸಿತ; ಹಲವು ಮನೆಗಳು, ಸರ್ಕಾರಿ ವಸತಿ ಗೃಹಗಳು ಧ್ವಂಸ..!

Delhi SIR: ಕ್ಷೇತ್ರ ಪರಿಶೀಲನೆ ಬಳಿಕ ಎಲ್.ಕೆ. ಅಡ್ವಾಣಿ, ಜಗದೀಪ್ ಧನಕರ್, ಜೈಶಂಕರ್ ಸೇರಿ ಹಲವು ಗಣ್ಯರ Voter ID ಗೊಂದಲಕ್ಕೆ ತೆರೆ!

ಸಂಘರ್ಷ ಅಂತ್ಯಕ್ಕೆ ಇರಾನ್ 7 ದಿನಗಳ ಯೋಜನೆ ಪ್ರಸ್ತಾಪ: ಹಾರ್ಮುಜ್ ಜಲಸಂಧಿ ಮತ್ತೆ ಮುಕ್ತ

ವಿಶ್ವಸಂಸ್ಥೆಯಲ್ಲಿ Pak ಪ್ರಧಾನಿಗೆ ಮುಖಭಂಗ: ಭಯೋತ್ಪಾದನೆ ಕುರಿತ ಪ್ರಶ್ನೆ ಎದುರಿಸಲಾಗದೆ ತಲೆತಗ್ಗಿಸಿ ನಡೆದ ಶೆಹಬಾಜ್ ಷರೀಫ್..! Video

ವಿಶ್ವಸಂಸ್ಥೆಯಲ್ಲಿ ನೆತನ್ಯಾಹುಗೆ ಬಿಗ್ ಶಾಕ್: ಭಾಷಣ ಬಹಿಷ್ಕರಿಸಿ ಹೊರನಡೆದ ಹತ್ತಾರು ದೇಶಗಳ ಪ್ರತಿನಿಧಿಗಳು,"ನೈತಿಕ ಹೇಡಿಗಳು" ಎಂದು ಕರೆದ ಇಸ್ರೇಲ್ ಪ್ರಧಾನಿ..!