ನವದೆಹಲಿ: ಅಕ್ರಮವಾಗಿ ಭಾರತೀಯ ಜಲಗಡಿ ಪ್ರವೇಶಿಸಿದ್ದ ಪಾಕಿಸ್ತಾನದ ನೌಕೆಯೊಂದನ್ನು ಜಪ್ತಿ ಮಾಡಿದ್ದು, ಬೋಟ್ ನಲ್ಲಿದ್ದ 8 ಮಂದಿಯನ್ನು ಕರವಾಳಿ ಸುರಕ್ಷತಾ ಪಡೆ ಮಂಗಳವಾರ ಬಂಧಿಸಿದ್ದಾರೆ.
ಕಳೆದ ವರ್ಷದ 31ರಂದು ಗುಜರಾತ್ ಕರಾವಳಿಯಾಚೆ ಪಾಕ್ ದೋಣಿ ಸ್ಫೋಟಗೊಂಡಿತ್ತು. ಇದೇ ಪ್ರದೇಶದಲ್ಲಿ ನಾಲ್ಕು ದಿನಗಳಿಂದ ಅಕ್ರಮವಾಗಿ ಸುತ್ತುತ್ತಿದ್ದ ನೌಕೆಯ ಚಲನವಲನದ ಮೇಲೆ ಕರಾವಳಿ ಪಡೆ ನಿಗಾ ಇರಿಸಿದ್ದು, ಕಳೆದ ರಾತ್ರಿ ನೌಕೆಯನ್ನು ವಶ ಪಡಿಸಿಕೊಂಡಿದ್ದು, ಇಂದು ಬೋಟ್ ನಲ್ಲಿದ್ದ 8 ಮಂದಿ ಸ್ಮಗ್ಲರ್ ಗಳನ್ನು ಪಡೆ ವಶಕ್ಕೆ ಪಡೆದಿದೆ.