ಮುಂಬೈ ದಾಳಿಯ ರೂವಾರಿ ಡೇವಿಡ್ ಹೆಡ್ಲಿ 
ದೇಶ

ಮುಂಬೈ ದಾಳಿಯ ನಂತರ ಎಲ್ ಇಟಿ ಸೇರಲು ಡೇವಿಡ್ ಹೆಡ್ಲಿ ನಿರ್ಧರಿಸಿದ್ದ

ಪಾಕಿಸ್ತಾನದ ಲಷ್ಕರ್ -ಇ-ತೋಯ್ಬಾ (ಎಲ್ ಇಟಿ) ಉಗ್ರ ಸಂಘಟನೆಗೆ ಸೇರ್ಪಡೆಗೊಂಡು ಪೂರ್ಣವಧಿಯಾಗಿ ಕೆಲಸ ಮಾಡಲು ನಿರ್ಧರಿಸಿದ್ದೆ ಎಂದು...

ವಾಷಿಂಗ್ಟನ್: ಪಾಕಿಸ್ತಾನದ ಲಷ್ಕರ್ -ಇ-ತೋಯ್ಬಾ (ಎಲ್ ಇಟಿ) ಉಗ್ರ ಸಂಘಟನೆಗೆ ಸೇರ್ಪಡೆಗೊಂಡು ಪೂರ್ಣವಧಿಯಾಗಿ ಕೆಲಸ ಮಾಡಲು ನಿರ್ಧರಿಸಿದ್ದೆ ಎಂದು 26/11 ಮುಂಬೈ ದಾಳಿಯ ರೂವಾರಿ ಹಾಗೂ ಅಮೆರಿಕದ ಪಾಕ್ ಸಂಜಾತ ಉಗ್ರ ಡೇವಿಡ್ ಹೆಡ್ಲಿ ಹೇಳಿಕೊಂಡಿದ್ದಾನೆ.

ಖಾಸಗಿ ಟಿವಿ ಚಾನೆಲ್ ವೊಂದು ಪ್ರಸಾರ ಮಾಡುವ ಅಮೆರಿಕನ್ ಟೆರರಿಸ್ಟ್ ಎಂಬ ಸಾಕ್ಷ್ಯ ಚಿತ್ರ ಕಾರ್ಯಕ್ರಮದಲ್ಲಿ ಹೆಡ್ಲಿಯ ಆತ್ಮ ಚರಿತ್ರೆಯ ಪುಸ್ತಕವನ್ನು ಬಹಿರಂಗ ಪಡಿಸಿದ್ದು, ಅದರಲ್ಲಿ ಎಲ್ ಇಟಿ ಉಗ್ರ ಸಂಘಟನೆಯಲ್ಲಿ ತನ್ನನ್ನು ತಾನು ಪೂರ್ಣವಾಗಿ ತೊಡಗಿಸಿಕೊಳ್ಳುವುದಾಗಿ ಹೆಡ್ಲಿ ಬರೆದುಕೊಂಡಿದ್ದ ಮಾಹಿತಿ ನೀಡಿದೆ.

ಡೇವಿಡ್ ಹೆಡ್ಲಿ ತಂದೆ ಪಾಕಿಸ್ತಾನದವರಾಗಿದ್ದು, ತಾಯಿ ಅಮೆರಿಕದವರಾಗಿದ್ದ ಹಿನ್ನಲೆಯಲ್ಲಿ ದಾವುದ್ ಗಿಲಾನಿ ಎಂಬ ಹೆಸರಿನಿಂದ ಡೇವಿಡ್ ಕೋಲ್ಮನ್ ಹೆಡ್ಲಿ ಎಂಬ ಹೆಸರಿಟ್ಟಿಕೊಂಡಿದ್ದ. ಆದರೇ ದಾವೂದ್ ಗಿಲಾನಿ ಎಂಬ ಹೆಸರಿನಲ್ಲಿ ಅಮೆರಿಕದ ಪಾಸ್‌ಪೋರ್ಟ್ ಪಡೆದುಕೊಂಡಿದ್ದನು.

ಡ್ರಗ್ ಸ್ಮಗ್ಲರ್ ಆಗಿದ್ದ ಹೆಡ್ಲಿ ಪ್ರಾರಂಭಿಕವಾಗಿ ಎಲ್ ಇಟಿಯೊಡನೆ ಕೆಲಸ ಮಾಡಲು ಆರಂಭಿಸಿ, ಅಮೆರಿಕದ ಪಾಸ್ ಪೋರ್ಟ್ ಪಡೆದು ಭಾರತಕ್ಕೆ ಭೇಟಿ ನೀಡಲು ಪ್ರಾರಂಭಿಸಿದ್ದಾನೆ. ನಂತರ ದಾಳಿ ಮಾಡುವ ಕುರಿತು ಯೋಜನೆ ರೂಪಿಸಿದ್ದಾನೆ. ಎಲ್ಲೆಲ್ಲಿ ಉಗ್ರರು ಬಾಂಬ್ ಇಡಬೇಕು ಹಾಗೂ ಹೇಗೆ ದಾಳಿ ನಡೆಸಬೇಕು ಎಂಬುದರ ಬಗ್ಗೆ ಯೋಜನೆ ರೂಪಿಸಿದ್ದನು ಎನ್ನಲಾಗಿದೆ.

ಪ್ರಪ್ರಥಮ ಬಾರಿಗೆ ಎಲ್ ಇಟಿಯೊಡನೆ ಕೆಲಸ ಆರಂಭಿಸಿದ ಹೆಡ್ಲಿ ತನ್ನ ಅನುಭವವನ್ನು ಹಾಗೂ ಎಲ್ ಇಟಿ ಉಗ್ರರ ನಿಷ್ಠೆಯ ಬಗ್ಗೆ ಹೊಗಳಿಕೊಂಡಿದ್ದಾನೆ.

2000ನೇ ಅಕ್ಟೋಬರ್ ನಲ್ಲಿ ಎಲ್ ಇಟಿ ಉಗ್ರರನ್ನು ಆಕಸ್ಮಿಕವಾಗಿ ಭೇಟಿಯಾದೆ. ಅಲ್ಲಿ ಅವರ ವಾರ್ಷಿಕ ಸಮಾವೇಶದಲ್ಲಿ ಭಾಗವಹಿಸಿದೆ. ಅದು ನನ್ನ ಮೇಲೆ ಪರಿಣಾಮ ಬೀರಿತು. ನಂತರ ಅನೇಕ ತರಬೇತಿಗಳನ್ನು ಪಡೆಯುತ್ತಾ ಬಂದೆ.

ಎಲ್ ಇಟಿ ಉಗ್ರ ಸಂಘಟನೆ ದಾವೂದ್ ಗಿಲಾನಿ ಹೆಸರನ್ನು ಬದಲಿಸಲು ಸೂಚಿಸಿದ ಹಿನ್ನಲೆಯಲ್ಲಿ ದಾವೂದ್ ಗಿಲಾನಿ ಹೆಸರ ಬದಲಿಗೆ ಡೇವಿಡ್ ಕೋಲ್ಮನ್ ಹೆಡ್ಲಿ ಎಂದು ಹೆಸರಿಟ್ಟುಕೊಂಡೆನು. ದಾವೂದ್ ಎಂಬ ಪದಕ್ಕೆ ಇಂಗ್ಲಿಷ್ ನಲ್ಲಿ ಡೇವಿಡ್, ಹಾಗೇ ತಾತನ ಹೆಸರು ಕೋಲ್ಮನ್ ಮತ್ತು ಹೆಡ್ಲಿ ಎಂದು ತಾಯಿ ಪ್ರೀತಿಯಿಂದ ಕರೆಯುತ್ತಿದ್ದನ್ನು ಒಟ್ಟು ಸೇರಿಸಿ ಡೇವಿಡ್ ಕೋಲಾಮನ್ ಹೆಡ್ಲಿ ಎಂದು ಹೆಸರಿಟ್ಟುಕೊಂಡೆ ಎಂದು ಆತ್ಮ ಚರಿತ್ರೆ ಪುಸ್ತಕದಲ್ಲಿ ಬರೆದುಕೊಂಡಿದ್ದಾನೆ.

ಹೀಗೆ ಹಲವು ವಿಷಯಗಳನ್ನು ತನ್ನ ಆತ್ಮ ಚರಿತ್ರೆಯಲ್ಲಿ ಪ್ರಸ್ತಾಪಿಸಿರುವ ಹೆಡ್ಲಿ, ಎಲ್ ಇಟಿ ಉಗ್ರ ಸಂಘಟನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ತಾನು ಎಲ್ಇಟಿ ಗಾಗಿ ಪೂರ್ಣ ಕೆಲಸ ಮಾಡುವುದಾಗಿ ತಿಳಿಸಿದ್ದನು ಎಂದು ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT