ಪ್ರಧಾನಿ ಮೋದಿ-ಚೀನಾ ಅಧ್ಯಕ್ಷ ಜಿನ್ ಪಿಂಗ್ 
ದೇಶ

ಮೋದಿ ಚೀನಾ ಭೇಟಿ ಸ್ವಾಗತಕ್ಕೆ ವಿಶೇಷ ಸಿದ್ಧತೆ

ಪ್ರಧಾನಿ ಮೋದಿ ಮುಂದಿನ ತಿಂಗಳು ಚೀನಾ ಪ್ರವಾಸ ಕೈಗೊಳ್ಳಲಿದ್ದಾರೆ. ಗುಜರಾತ್ ಭೇಟಿ ವೇಳೆ ಚೀನಾ ಅಧ್ಯಕ್ಷ ಕ್ಸಿ ಜಿನ್‍ಪಿಂಗ್‍ರಿಗೆ ನೀಡಲಾಗಿದ್ದ ಅದ್ಧೂರಿ ಸ್ವಾಗತ..

ಬೀಜಿಂಗ್/ನವದೆಹಲಿ: ಪ್ರಧಾನಿ ಮೋದಿ ಮುಂದಿನ ತಿಂಗಳು ಚೀನಾ ಪ್ರವಾಸ ಕೈಗೊಳ್ಳಲಿದ್ದಾರೆ. ಗುಜರಾತ್ ಭೇಟಿ ವೇಳೆ ಚೀನಾ ಅಧ್ಯಕ್ಷ ಕ್ಸಿ ಜಿನ್‍ಪಿಂಗ್‍ರಿಗೆ ನೀಡಲಾಗಿದ್ದ ಅದ್ಧೂರಿ ಸ್ವಾಗತದ ಮಾದರಿಯಲ್ಲೇ ಹುಟ್ಟೂರು ಶಾನ್ ಕ್ಸಿ ಪ್ರಾಂತ್ಯದಲ್ಲಿ ನೀಡಲಿದ್ದಾರೆ.

ಅದಕ್ಕಾಗಿ ಸಕಲ ಸಿದ್ಧತೆಗಳನ್ನೂ ಮಾಡಿಸುತ್ತಿದ್ದಾರೆ. ಭಾರತ ಪ್ರವಾಸದ ವೇಳೆ ಪ್ರಧಾನಿ ಮೋದಿ ಚೀನಾ ಅಧ್ಯಕ್ಷರಿಗೆ ಜೂಲಾ ರೈಡ್‍ನಲ್ಲಿ ಸುತ್ತಾಡಿಸಿದ್ದಲ್ಲದೆ, ಸಾಬರಮತಿ ಆಶ್ರಮಕ್ಕೆ ಕರೆದೊಯ್ದು ಚರಕದಿಂದ ನೇಯ್ಗೆಯನ್ನೂ ಮಾಡಿಸಿದ್ದರು. ವೈಲ್ಡ್ ಗೂಸ್ ಪಗೋಡಾಕ್ಕೆ ಮೋದಿಯವರನ್ನು ಕರೆದೊಯ್ದು ಶತಮಾನಗಳ ಹಿಂದಿನ ಬೌದ್ಧ ಶಾಸನಗಳನ್ನು ತೋರಿಸುವ ಯೋಜನೆ ಜಿನ್‍ಪಿಂಗ್ ಗಿದೆ. ಪಾಕಿಸ್ತಾನ ಜತೆಗೆ ಚೀನಾ ಹಲವು ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಿರುವುದರಿಂದ ಮೋದಿ ಪ್ರವಾಸ ಮಹತ್ವ ಪಡೆದಿದೆ.

26ಕ್ಕೆ ಮನ್‍ಕಿ ಬಾತ್
ಏಳನೇ ಆವೃತ್ತಿಯ ಮನ್ ಕಿ ಬಾತ್ ಕಾರ್ಯಕ್ರಮ ಏ.26ಕ್ಕೆ ಪ್ರಸಾರವಾಗಲಿದೆ.ಯಾವ ವಿಚಾರ ಎನ್ನುವುದು ಅಂತಿಮವಾಗಿಲ್ಲ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನಗರ ನಕ್ಸಲರ ಟಾರ್ಗೆಟ್‌ ಚಾಮುಂಡಿ ಬೆಟ್ಟ- ಬಿಎಲ್ ಸಂತೋಷ್: ಸತ್ಯ ಹೇಳಿದರೆ ಕೆಲವರು ಸಹಿಸಲ್ಲ, ಮಾತನಾಡದಿರುವುದೇ ಲೇಸು-dks

ಉಳಿಕೆ ಮತ್ತು ಹೂಡಿಕೆ ನಡುವೆ ಸಮತೋಲನವಿರಲಿ! (ಹಣಕ್ಲಾಸು)

ಜಮ್ಮುವಿನಲ್ಲಿ 24 ಗಂಟೆಗಳಲ್ಲಿ ದಾಖಲೆಯ 380 ಮಿಮೀ ಮಳೆ!

ಚಾಮುಂಡೇಶ್ವರಿ ದೇವಿ ಸುತ್ತ ನಡೆಯುತ್ತಿರುವ ರಾಜಕೀಯ ತೀವ್ರ ಬೇಸರ ತರಿಸಿದೆ: ಪ್ರಮೋದಾದೇವಿ ಒಡೆಯರ್

Techie Kidnap case: Lakshmi Menonಗೆ ಬಿಗ್ ರಿಲೀಫ್, ನಿರೀಕ್ಷಣಾ ಜಾಮೀನು ಮಂಜೂರು, ಏನಿದು ಪ್ರಕರಣ? ನಟಿ ಹೇಳಿದ್ದೇನು?

SCROLL FOR NEXT