ದೇಶ

ಆಸ್ಟ್ರೇಲಿಯಾ ಕ್ರೀಡಾಕೂಟಗಳಿಂದ ವಿದ್ಯಾರ್ಥಿನಿಯರಿಗೆ ನಿಷೇಧ ಹೇರಿದ ಇಸ್ಲಾಮಿಕ್ ಕಾಲೇಜ್!

Shilpa D

ಮೆಲ್ಬೋರ್ನ್: ಶಾಲಾ ಕಾಲೇಜು ಕನ್ಯೆಯರು ಇನ್ನು ಮುಂದೆ ಕ್ರೀಡಾಕೂಟಗಳಲ್ಲಿ ಭಾಗವಹಿಸಬಾರದಂತೆ, ಹೀಗಂತ ಆಸ್ಟ್ರೇಲಿಯಾದ ಇಸ್ಲಾಮಿಕ್ ಕಾಲೇಜೊಂದು ಫರ್ಮಾನು ಹೊರಡಿಸಿದೆ.
ಇಸ್ಲಾಂ ಧರ್ಮದಲ್ಲಿ ಕನ್ಯತ್ವಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಲಾಗುತ್ತೆ. ಹೀಗಾಗಿ ವಿದ್ಯಾರ್ಥಿನಿಯರು ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸುವುದರಿಂದ ಅವರು ಕನ್ಯತ್ವ ಕಳೆದುಕೊಳ್ಳುತ್ತಾರೆ  ಎಂಬ ಕಾರಣ ನೀಡಿ ಕ್ರೀಡಾಕೂಟದಿಂದ ಅವರನ್ನು ನಿಷೇಧಿಸಲಾಗಿದೆ.
ಮೆಲ್ಬೋರ್ನ್ ನಲ್ಲಿರುವ ಆಲ್ ತಕ್ವಾ ಕಾಲೇಜು ಈ ಹೊಸ ನಿಯಮ ತರಲು ಮುಂದಾಗಿದೆ. ಈ ಸಂಬಂಧ ಶಿಕ್ಷಣ ಸಚಿವರಿಗೆ ಪತ್ರ ರವಾನಿಸಿದ್ದು ಶಾಲಾ ಕಾಲೇಜು ವಿದ್ಯಾರ್ಥಿನಿಯರು ಈ ಕ್ರಮವನ್ನು ವಿರೋಧಿಸಿದ್ದಾರೆ.

ಹೆಣ್ಣು ಮಕ್ಕಳು ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸುವುದರಿಂದ ಅವರ ಕನ್ಯತ್ವ ಕಳೆದುಕೊಳ್ಳುವುದಲ್ಲೇ, ಗರ್ಭಕೋಶಕ್ಕೆ ಗಾಯಗಳಾಗುವುದರಿಂದ, ಮಕ್ಕಳನ್ನು ಹೆರುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಾರೆ ಎಂಬ ನಂಬಿಕೆ ಇದೆ. ಹೀಗಾಗಿ ಯಾವುದೇ ಸ್ಪೋರ್ಟ್ಸ್ ಗಳಲ್ಲಿ ಭಾಗವಹಿಸದಂತೆ ನೋಟಿಸ್ ನೀಡಿರುವುದಾಗಿ ಆಲ್ ತಕ್ವಾ ಕಾಲೇಜಿನ ಪ್ರಿನ್ಸಿಪಾಲ್ ಒಮರ್ ಹಲ್ಲಾಕ್ ಸಮರ್ಥಿಸಿಕೊಂಡಿದ್ದಾರೆ.  

ಈ ಸಂಬಂಧ ತಜ್ಞರ ಅಭಿಪ್ರಾಯ ಪಡೆದು ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ಅಲ್ಲಿನ ಶಿಕ್ಷಣ ಸಚಿವರು  ಪ್ರತಿಕ್ರಿಯಿಸಿದ್ದಾರೆ. ಒಟ್ಟಾರೆ ಕಾಲೇಜು ಆಡಳಿತ ಮಂಡಳಿಯ ಈ ಕ್ರಮ ಅಲ್ಲಿನ ವಿದ್ಯಾರ್ಥಿನಿಯರನ್ನು ಕೆರಳಿಸಿರುವುದಂತು ಸತ್ಯ.

SCROLL FOR NEXT