ನೇಪಾಳದಲ್ಲಿ ಸಂಭವಿಸಿದ ಭೂಕಂಪವನ್ನು `ಗ್ರೇಟ್ ಅರ್ತ್‍ಕ್ವೇಕ್'(ಮಹಾ ಭೂಕಂಪ) ವಿಭಾಗಕ್ಕೆ ಸೇರಿಸಲಾಗಿದೆ.
ಭೂಕಂಪವನ್ನು ಅದರ ತೀವ್ರತೆಯ ಆಧಾರದಲ್ಲಿ 6 ವಿಧಗಳಾಗಿ ವರ್ಗೀಕರಿಸಲಾಗುತ್ತದೆ. ಅವೆಂದರೆ, ಅಲ್ಪ, ಲಘು, ಸಾಧಾರಣ, ಪ್ರಬಲ, ಭೀಕರ ಮತ್ತು ಮಹಾ ಭೂಕಂಪ.
ಶನಿವಾರ ಸಂಭವಿಸಿದ ಕಂಪನದ ತೀವ್ರತೆಯು 7.9ರ ತೀವ್ರತೆ ದಾಟಿರುವ ಕಾರಣ ಅದನ್ನು `ಮಹಾ ಭೂಕಂಪ' ಎಂದು ಕರೆಯಲಾಗಿದೆ.
ಇದು ಎಲ್ಲಕ್ಕಿಂತ ಭೀಕರವಾಗಿದ್ದು, ಕಂಪನ ಸಂಭವಿಸಿದ ಸುತ್ತಮುತ್ತಲಿನ ಪ್ರದೇಶ ಸಂಪೂರ್ಣವಾಗಿ ನಾಶವಾಗುವ ಸಾಧ್ಯತೆಯೇ ಹೆಚ್ಚು. ಇಂತಹ ದುರಂತ ಸಂಭವಿಸುವುದು ಪ್ರತಿ 5ರಿಂದ 10 ವರ್ಷಗಳಿಗೊಮ್ಮೆ.