ಮನಿಶಾ ಕೊಯಿರಾಲ 
ದೇಶ

ಮೋದಿಗೆ ಧನ್ಯವಾದ ಹೇಳಿದ ಮನಿಶಾ ಕೊಯಿರಾಲ

ಭೂಕಂಪದಿಂದ ನಲುಗಿ ಹೋಗಿರುವ ನೇಪಾಳಕ್ಕೆ ಭಾರತ ಪ್ರಧಾನಿ ನರೇಂದ್ರ ಮೋದಿ ಅವರು ಕ್ಷಿಪ್ರಗತಿಯಲ್ಲಿ ಸ್ಪಂಧಿಸಿ ನೆರವಿನ ಭರವಸೆ...

ನವದೆಹಲಿ: ಭೂಕಂಪದಿಂದ ನಲುಗಿ ಹೋಗಿರುವ ನೇಪಾಳಕ್ಕೆ ಭಾರತ ಪ್ರಧಾನಿ ನರೇಂದ್ರ ಮೋದಿ ಅವರು ಕ್ಷಿಪ್ರಗತಿಯಲ್ಲಿ ಸ್ಪಂಧಿಸಿ ನೆರವಿನ ಭರವಸೆ ನೀಡಿದಕ್ಕೆ ನಟಿ ಮನಿಶಾ ಕೊಯಿರಾಲ ಮೋದಿ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು ಹೇಳಿದ್ದಾರೆ.

ಮನೀಶಾ ಕೊಯಿರಾಲ ನೇಪಾಳದವರಾಗಿದ್ದು, ಅಲ್ಲಿ ಮೊತ್ತಮೊದಲ ಚುನಾಯಿತ ಪ್ರಧಾನಿ ಬಿ.ಪಿ. ಕೊಯಿರಾಲ ಅವರ ಮೊಮ್ಮಗಳಾಗಿದ್ದಾರೆ. ನೇಪಾಳದಲ್ಲಿ ಭೀಕರ ಭೂಕಂಪದಿಂದ ಆದ ಅನಾಹುತ ಕಂಡು ಮನೀಶಾ ಕೊಯಿರಾಲ ಕಣ್ಣೀರಿಟಿದ್ದಾರೆ. ಇದೇ ವೇಳೆ ರಕ್ಷಣಾ ಚಟುವಟಿಕೆಯಲ್ಲಿ ಭಾರತದ ಸಕ್ರಿಯ ಪಾತ್ರವನ್ನೂ ಶ್ಲಾಘಿಸಿದ್ದಾರೆ. ನಟಿ ತಮ್ಮ ಫೇಸ್ಬುಕ್ ಮತ್ತು ಟ್ವಿಟ್ಟರ್ ಪೇಜ್ ಗಳಲ್ಲಿ ಭಾರತ ಸರ್ಕಾರ ಹಾಗೂ ಪ್ರಧಾನಿಗೆ ಥ್ಯಾಂಕ್ಸ್ ಅರ್ಪಿಸಿದ್ದಾರೆ.

ನೇಪಾಳದಲ್ಲಿ ನಿನ್ನೆ ಸಂಭವಿಸಿದ ಭೂಕಂಪಗಳಿಂದ ಸುಮಾರು 2 ಸಾವಿರ ಜನರು ಮೃತಪಟ್ಟಿದ್ದಾರೆ. ಭಾರತದ ವಾಯುಪಡೆ ಯೋಧರು ತ್ವರಿತಗತಿಯಲ್ಲಿ ರಕ್ಷಣಾ ಕಾರ್ಯಗಳನ್ನು ನಡೆಸುತ್ತಿದ್ದು, ಸಾವಿರಾರು ಜನರನ್ನು ರಕ್ಷಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Asian Games 2026: 44 ವರ್ಷಗಳ ಬರ ನೀಗಿಸಿದ ಮಹಿಳಾ ಪಡೆ; ಚೀನಾ ಮಣಿಸಿ ಚಿನ್ನ ಗೆದ್ದ ಭಾರತ!

ಬೆಂಗಳೂರಿನಲ್ಲಿ ಮನೆ ಖರೀದಿದಾರರಿಗೆ 927 ಕೋಟಿ ವಂಚನೆ ಆರೋಪ: ಓಜೋನ್ ಅರ್ಬಾನಾ CMD ವಾಸುದೇವನ್ ಬಂಧನ!

Asian Games 2026: 1 ನಿಮಿಷದಲ್ಲಿ 2 ಚಿನ್ನದ ಪದಕ ಗೆದ್ದ ಭಾರತ, 75 ಪದಕಗಳೊಂದಿಗೆ 5ನೇ ಸ್ಥಾನಕ್ಕೆ ಲಗ್ಗೆ!

‘CEC ಜ್ಞಾನೇಶ್ ಕುಮಾರ್ ದೇಶದ್ರೋಹಿ’: ಮುಂಬೈನಲ್ಲಿ ಭುಗಿಲೆದ್ದ Cockroach Janata Party ಪ್ರತಿಭಟನೆ, ರಾಜೀನಾಮೆಗೆ ಬಿಗಿಪಟ್ಟು..!

ಜೆಡಿಎಸ್ ಪ್ರಧಾನ ಕಾರ್ಯದರ್ಶಿಯಾಗಿ Biggboss ಮಾಜಿ ಸ್ಪರ್ಧಿ ಜಾಹ್ನವಿ ನೇಮಕ!