ತೆಹ್ರಾನ್: ಇಸಿಸ್ ಉಗ್ರಗಾಮಿ ಸಂಘಟನೆಯ ಮುಖ್ಯಸ್ಥ ಅಬು ಬಕರ್ ಅಲ್ ಬಗ್ದಾದಿ ಸಾವನ್ನಪ್ಪಿರುವುದಾಗಿ ರೇಡಿಯೋ ಇರಾನ್ ವರದಿ ಮಾಡಿರುವುದಾಗಿ ಆಲ್ ಇಂಡಿಯಾ ರೇಡಿಯೋ(ಎಐಆರ್) ಸೋಮವಾರ ಟ್ವೀಟ್ ಮಾಡಿದೆ.
ಅಮೆರಿಕ ನೇತೃತ್ವದ ಜಂಟಿ ಪಡೆ ಕಳೆದ ಮಾರ್ಚ್ ನಲ್ಲಿ ನಡೆಸಿದ ವೈಮಾನಿಕ ದಾಳಿಯಲ್ಲಿ ಅಬು ಬಕರ್ ಅಲ್ ಬಗ್ದಾದಿ ಮಾರಣಾಂತಿಕ ಸ್ಥಿತಿಯಲ್ಲಿ ಗಾಯಗೊಂಡಿರುವುದಾಗಿ ಗಾರ್ಡಿಯನ್ ಕಳೆದ ವಾರ ವರದಿ ಮಾಡಿತ್ತು. ಅಲ್ಲದೆ ಬಗ್ದಾದಿ ಇಸಿಸ್ ಉಗ್ರ ಕಾರ್ಯಾಚರಣೆ ಮೇಲೆ ಹಿಡಿತ ಹೊಂದಿಲ್ಲ. ಯಾಕೆಂದರೆ ಬಗ್ದಾದಿ ಚೇತರಿಕೆ ಕಾಣದಷ್ಟು ಗಾಯಗೊಂಡಿರುವುದಾಗಿ ವರದಿ ವಿಶ್ಲೇಷಿಸಿತ್ತು.
ಈ ಮಧ್ಯೆ ಮಾರ್ಚ್ 18ರಂದು ಸಿರಿಯಾ ಗಡಿಭಾಗದ ಅಲ್ ಬಾಜ್ ನಲ್ಲಿ ಅಮೆರಿಕ ಪಡೆ ನಡೆಸಿದ ವೈಮಾನಿಕ ದಾಳಿಯಲ್ಲಿ ಇಸಿಸ್ ಮುಖ್ಯಸ್ಥ ಬಗ್ದಾದಿ ಗಂಭೀರವಾಗಿ ಗಾಯಗೊಂಡಿರುವ ಬಗ್ಗೆ ಯಾವುದೇ ಪುರಾವೆ ಇಲ್ಲ ಎಂದು ಅಮೆರಿಕ ಹೇಳಿದೆ. ಅಲ್ಲದೇ ಇಸಿಸ್ ಕೂಡಾ ಈ ಬಗ್ಗೆ ಯಾವುದೇ ಸ್ಪಷ್ಟನೆ ನೀಡಿಲ್ಲ.