ಹುಬ್ಬಳ್ಳಿ: ಮೇಕೆದಾಟು ಯೋಜನೆ ಜಾರಿ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿಯವರು ಮಧ್ಯಸ್ಥಿಕೆ ವಹಿಸುವಂತೆ ಕೋರಲು ಇಷ್ಟರಲ್ಲೇ ದೆಹಲಿಗೆ ನಿಯೋಗ ಕೊಂಡೊಯ್ಯಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ
ಅವರು, ಪ್ರಧಾನಿ ಮೋದಿಯವರ ಭೇಟಿಗೆ ದಿನಾಂಕಕ್ಕಾಗಿ ಕಾಯುತ್ತಿದ್ದೇವೆ. ಅನುಮತಿ ಕೊಟ್ಟ ಕೂಡಲೇ ದೆಹಲಿಗೆ ಹೋಗುತ್ತೇವೆ.
ಮೇಕೆದಾಟು ವಿಷಯದಲ್ಲಿ ಪ್ರಧಾನಿ ಮಧ್ಯಸ್ಥಿಕೆಯ ಅಗತ್ಯವಿದೆ. ಇದರಿಂದ ಯೋಜನೆ ಸುಗಮಗೊಳ್ಳಲಿದೆ ಎಂದರು. ಕಳಸಾ ಬಂಡೂರಿ ವಿಷಯ ನ್ಯಾಯಾಲಯದಲ್ಲಿದೆ. ಹೀಗಿರುವಾಗ
ಪ್ರಧಾನಿ ಮಧ್ಯಸ್ಥಿಕೆ ಅಸಾಧ್ಯ. ಮಧ್ಯಸ್ಥಿಕೆಗೆ ಕೋರುವುದೂ ಅಸಮಂಜಸ.
ಕಳಸಾ ಬಂಡೂರಿ ವಿಷಯದಲ್ಲಿ ಸರ್ಕಾರ ನಿರ್ಲಕ್ಷ್ಯ ಧೋರಣೆ ತಾಳಿದೆ ಎಂಬ ಮಾತಿನಲ್ಲಿ ಹುರುಳಿಲ್ಲ ಎಂದು ಪ್ರತಿಕ್ರಿಯಿಸಿದರು.