ಯುವ ನಟ ಕೆ ವಿಜಯ್ 
ದೇಶ

ನೇಪಾಳ ಭೂಕಂಪ: ಯುವ ನಟ ವಿಜಯ್ ಸಾವು

ನೇಪಾಳದಲ್ಲಿ ಸಂಭವಿಸಿದ ಪ್ರಬಲ ಭೂಕಂಪದಲ್ಲಿ ತೆಲುಗಿನ ಯುವ ನಟ 25 ವರ್ಷದ ಕೆ. ವಿಜಯ್ ಅಸುನೀಗಿದ್ದಾರೆ.

ಹೈದರಾಬಾದ್: ನೇಪಾಳದಲ್ಲಿ ಸಂಭವಿಸಿದ ಪ್ರಬಲ ಭೂಕಂಪದಲ್ಲಿ ತೆಲುಗಿನ ಯುವ ನಟ 25 ವರ್ಷದ ಕೆ. ವಿಜಯ್ ಅಸುನೀಗಿದ್ದಾರೆ.

ಚಿತ್ರೀಕರಣ ನಿಮಿತ್ತ ಚಿತ್ರ ತಂಡದೊಂದಿಗೆ ನೇಪಾಳಕ್ಕೆ ತೆರಳಿದ್ದ ವಿಜಯ್ ಅವಘಡದಲ್ಲಿ ಸಾವಿಗೀಡಾಗಿದ್ದಾರೆ ಎಂದು ಸಂಗೀತ ನಿರ್ದೇಶಕ ಕಿಶನ್ ಹೈದರಾಬಾದ್ ನಲ್ಲಿ ತಿಳಿಸಿದ್ದಾರೆ.

ನಟ ಮತ್ತು ನೃತ್ಯ ನಿರ್ದೇಶಕರಾಗಿರುವ ವಿಜಯ್ ಭೂಕಂಪಕ್ಕೆ ಬಲಿಯಾಗಿದ್ದು, ಜೊತೆಗಿದ್ದ ಮೂವರೂ ಗಾಯಗೊಂಡಿದ್ದಾರೆ. ಗುಂಟೂರು ಜಿಲ್ಲೆಯ ಬಪಟ್ಲಾದವರಾದ ವಿಜಯ್ ಮೃತದೇಹವನ್ನು ಸ್ವದೇಶಕ್ಕೆ ತರುವಂತೆ ತೆಲುಗು ಚಿತ್ರರಂಗ ಸರ್ಕಾರವನ್ನು ಆಗ್ರಹಿಸಿದೆ.

ಏಪ್ರಿಲ್ 15ರಂದು ತಂಡ ಗೋರಖ್ ಪುರ ಮಾರ್ಗವಾಗಿ ನೇಪಾಳಕ್ಕೆ ತೆರಳಿದ್ದ ಚಿತ್ರ ತಂಡ ಭೂಕಂಪ ಸಂಭವಿಸಿದ ಮೊದಲ ದಿನ ಚಿತ್ರತಂಡದ 20 ಮಂದಿಯ  ಸುರಕ್ಷಿತರಾಗಿದ್ದರು. ಆದರೆ ಬಳಿಕ ಸಂಭವಿಸಿದ ಭೂಕಂಪದಲ್ಲಿ ಅವರು ಮೃತಪಟ್ಟಿರುವುದಾಗಿ ಕಿಶನ್ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮೈಸೂರು ರಾಜಮನೆತನ ಹೊರಗಿಟ್ಟು ಕರ್ನಾಟಕ ಇತಿಹಾಸ ಊಹಿಸುವುದು ಕಷ್ಟ': ಗವಿಸಿದ್ಧೇಶ್ವರ ಶ್ರೀಗಳು; Video

'ಮೊದಲು ನಿಮ್ಮ ಅಮೆರಿಕದಲ್ಲಿ ಕೈಗೆಟುಕುವ ದರದಲ್ಲಿ ಸೇವೆ ಒದಗಿಸಿ': ಒತ್ತಡಕ್ಕೆ ಭಾರತ ಮಣಿಯಲ್ಲ; ಎಲಾನ್ ಮಸ್ಕ್ ವಿರುದ್ಧ ನಿಶಿಕಾಂತ್ ದುಬೆ

'ನನ್ನನ್ನಲ್ಲ, ನಿಮ್ ಗಂಡನ ಗುರಾಯಿಸಿ', ಜಯಾ ಬಚ್ಚನ್‌ ಖಡಕ್ ನೋಟಕ್ಕೆ ಫೋಟೋಗ್ರಾಫರ್ ತಿರುಗೇಟು! Video

ಮೈಸೂರು ದಸರಾಕ್ಕೆ ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳಿಂದ ಅಧಿಕೃತ ಚಾಲನೆ

4 ಜನರಿಗೆ ಒಂದೇ ಟಿಕೆಟ್! ಸಾರಿಗೆ ಇಲಾಖೆಯಲ್ಲಿ ಡೀಸೆಲ್ ಬೆನ್ನಲ್ಲೇ ಟಿಕೆಟ್ ರೋಲ್ ಕೊರತೆ