ಕಠ್ಮಂಡು: ಕಳೆದ ಶನಿವಾರ ನೇಪಾಳದಲ್ಲಿ ಸಂಭವಿಸಿದ ಭೀಕರ ಭೂಕಂಪದಿಂದ ಸಾವಿನ ಸಂಖ್ಯೆ ಕ್ಷಣಕ್ಷಣಕ್ಕೂ ಹೆಚ್ಚುತ್ತಿದ್ದು, ಸಾವಿನ ಸಂಖ್ಯೆ 10 ಸಾವಿರ ತಲುಪುವ ಸಾಧ್ಯತೆ ಇದೆ ಎಂದು ಮಂಗಳವಾರ ನೇಪಾಳ ಪ್ರಧಾನಿ ಸುಶಿಲ್ ಕೋಯಿರಾಲ ಅವರು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ನಮ್ಮ ದೇಶಕ್ಕೆ ಇದೊಂದು ದೊಡ್ಡ ಸವಾಲಿನ ಸಮಯ ಎಂದಿರುವ ಕೋಯಿರಾಲ, ಸಮರೋಪಾದಿಯಲ್ಲಿ ರಕ್ಷಣೆ ಮತ್ತು ಪರಿಹಾರ ಕಾರ್ಯ ನಡೆಸಲಾಗುತ್ತಿದೆ. ನೇಪಾಳಕ್ಕೆ ಇದು ತೀವ್ರ ಕಷ್ಟಕರ ಮತ್ತು ಸವಾಲಿನ ಸಮಯ ಎಂದು ಅವರು ಹೇಳಿದ್ದಾರೆ.
ಈ ಮಧ್ಯೆ ಪರಿಹಾರ ಕಾರ್ಯಾಚರಣೆಗಾಗಿ ಭಾರತ ಮತ್ತಷ್ಟು ರಕ್ಷಣಾ ಸಮಾಗ್ರಿಗಳನ್ನು ಕಳುಹಿಸಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ವಿಕಾಸ್ ಸ್ವರೂಪ್ ಅವರು ಟ್ವಿಟ್ ಮಾಡಿದ್ದಾರೆ.