ದೇಶ

ಗೋಮಾಂಸ ನಿಷೇಧಕ್ಕೆ ತಡೆ ನೀಡಲು ಬಾಂಬೆ ಹೈಕೋರ್ಟ್ ನಕಾರ

Lingaraj Badiger

ಮುಂಬೈ: ರಾಜ್ಯದಲ್ಲಿ ಗೋಮಾಂಸ ನಿಷೇಧಿಸಿರುವ ಮಹಾರಾಷ್ಟ್ರ ಸರ್ಕಾರದ ಆದೇಶಕ್ಕೆ ತಡೆ ನೀಡಲು ಬಾಂಬೆ ಹೈಕೋರ್ಟ್ ಬುಧವಾರ ನಿರಾಕರಿಸಿದೆ.

ಮಹಾರಾಷ್ಟ್ರ ಪ್ರಾಣಿ ಸಂರಕ್ಷಣಾ ಕಾಯ್ದೆಯಡಿ ಇತ್ತೀಚಿಗೆ ಮಹರಾಷ್ಟ್ರ ಸರ್ಕಾರ ಹಸು ಮತ್ತು ಎತ್ತುಗಳನ್ನು ಕೊಲ್ಲುವದಕ್ಕೆ ಮತ್ತು ತಿನ್ನುವುದಕ್ಕೆ ನಿಷೇಧ ಹೇರಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಲಾಗಿತ್ತು. ಅಲ್ಲದೆ ನಮಗೆ ಇಷ್ಟವಾದ ಆಹಾರ ತಿನ್ನುವುದು ನಮ್ಮ ಹಕ್ಕು ಎಂದು ವಾದಿಸಿದ್ದರು.

ಸರ್ಕಾರದ ಪರ ವಾದ ಮಂಡಿಸಿದ ಅಡ್ವೋಕೇಟ್ ಜನರಲ್ ಸುನಿಲ್ ಮನೋಹರ್ ಅವರು, ಗೋಮಾಂಸ ತಿನ್ನುವುದು ಮೂಲಭೂತ ಹಕ್ಕು ಅಲ್ಲ. ಪ್ರಾಣಿಗಳ ಸಂರಕ್ಷಣೆಗಾಗಿ ಸರ್ಕಾರ ಈ ಕಾಯ್ದೆ ಜಾರಿಗೆ ತಂದಿದೆ ಎಂದರು.

ಈ ಹಿಂದಿನ ವಿಚಾರಣೆಯಲ್ಲಿ
ಹಸುಗಳು ಎತ್ತುಗಳನ್ನು ಕೊಳ್ಳುವುದನ್ನು ಹಾಗೂ ತಿನ್ನುವುದನ್ನು ನಿಷೇಧಿಸಿದ್ದೇಕೆ, ಈ ನಿಷೇಧ ಬೇರೆ ಪ್ರಾಣಿಗಳಿಗೇಕೆ ಅನ್ವಯ ಆಗುವುದಿಲ್ಲ ಎಂದು ಬಾಂಬೆ ಹೈಕೋರ್ಟ್ ಪ್ರಶ್ನಿಸಿತ್ತು. ಇದಕ್ಕೆ ಉತ್ತರಿಸಿದ್ದ ಸರ್ಕಾರ, ಅದನ್ನೂ ಪರಿಶೀಲಿಸುತ್ತಿದೆ. ಇದು ಪ್ರಾರಂಭ ಮಾತ್ರ(ಹಸು ಮತ್ತು ಎತ್ತುಗಳನ್ನು ಕೊಲ್ಲುವುದಕ್ಕೆ ನಿಷೇಧ). ಇತರ ಪ್ರಾಣಿಗಳನ್ನು ಕೊಲ್ಲುವುದನ್ನೂ ನಿಷೇಧಿಸಲು ಸಹ ಸರ್ಕಾರ ಚಿಂತಿಸುತ್ತಿದೆ . ಸದ್ಯಕ್ಕೆ ಹಸುಗಳನ್ನು ಮತ್ತು ಎತ್ತುಗಳನ್ನು ರಕ್ಷಿಸುವುದಕ್ಕೆ ರಾಜ್ಯ ಬದ್ಧವಾಗಿದೆ ಎಂದು ಅವರು ಹೇಳಿತ್ತು.

SCROLL FOR NEXT