ನವದೆಹಲಿ: ಆಮ್ ಆದ್ಮಿ ಪಕ್ಷದ ರ್ಯಾಲಿಯಲ್ಲಿ ರಾಜಸ್ತಾನ ರೈತ ಗಜೇಂದ್ರ ಸಿಂಗ್ ನೇಣು ಬಿಗಿದುಕೊಂಡು ಸಾವನ್ನಪ್ಪಿರುವುದು ಶವಪರೀಕ್ಷೆಯಲ್ಲಿ ದೃಢಪಟ್ಟಿದೆ.
ಮಂಗಳವಾರ ಸಂಜೆ ದೆಹಲಿ ಪೊಲೀಸರು ಗಜೇಂದ್ರ ಸಿಂಗ್ ಮರಣೋತ್ತರ ವರದಿ ಪಡೆದುಕೊಂಡಿದ್ದು, ವರದಿಯಲ್ಲಿನ ಅಂಶಗಳನ್ನು ತಿಳಿಸಿದ್ದಾರೆ.
ಮರಣೋತ್ತರ ಪರೀಕ್ಷೆಯ ವರದಿ ನೀಡಿರುವ ವೈದ್ಯರು ಗಜೇಂದ್ರ ಸಿಂಗ್ ದೇಹದಲ್ಲಿ 7 ಕಡೆ ತರಚಿದ ಗಾಯಗಳಿದ್ದುದ್ದನ್ನು ಉಲ್ಲೇಖಿಸಿದ್ದಾರೆ. ಆತ ಮರದ ಮೇಲಿಂದ ಕೆಳಗೆ ಆತನ ದೇಹದ 7 ಕಡೆ ತರಚಿದ ಗಾಯಗಳಾಗಿದ್ದವು. ಎಲ್ಲಿಯೂ ಮೂಳೆ ಮುರಿತ ಆಗಿರಲಿಲ್ಲ ಎಂದು ವರದಿಯಲ್ಲಿ ದಾಖಲಿಸಿದ್ದಾರೆ.
ದೆಹಲಿ ಪೋಲೀಸರು ಗಜೇಂದ್ರ ಸಿಂಗ್ ಆತ್ಮಹತ್ಯೆ ಪ್ರಕರಣದ ತನಿಖೆ ಮುಂದುವರಿಸಿದ್ದಾರೆ. ಆಪ್ ರ್ಯಾಲಿಯಲ್ಲಿ ಕೆಲವರು ಗಜೇಂದ್ರ ಸಿಂಗ್ ಗೆ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದರೆಂದು ಪ್ರತ್ಯಕ್ಷದರ್ಶಿಗಳು ವಿಚಾರಣೆ ವೇಳೆ ತಿಳಿಸಿದ್ದರು. ಏಪ್ರಿಲ್ 22 ರಂದು ದೆಹಲಿಯ ಜಂತರ್ ಮಂತರ್ ನಲ್ಲಿ ಭೂಸ್ವಾಧೀನ ಮಸೂದೆ ವಿರೋಧಿಸಿ ಆಪ್ ಹಮ್ಮಿಕೊಂಡಿದ್ದ ರ್ಯಾಲಿಯಲ್ಲಿ ರೈತ ಗಜೇಂದ್ರ ಸಿಂಗ್ ಆತ್ನಹತ್ಯಗೆ ಶರಣಾಗಿದ್ದರು.