ದೇಶ

ಮಲಾಲ ಮೇಲೆ ದಾಳಿ ಮಾಡಿದ್ದ ಉಗ್ರರಿಗೆ ಜೀವಾವಧಿ ಶಿಕ್ಷೆ

Lingaraj Badiger

ಇಸ್ಲಾಮಾಬಾದ್: ೨೦೧೪ರ ನೊಬೆಲ್ ಶಾಂತಿ ಪ್ರಶಸ್ತಿ ವಿಜೇತೆ, ೧೭ ವರ್ಷದ ಮಕ್ಕಳ ಹಕ್ಕುಗಳ ಹೋರಾಟಗಾರ್ತಿ ಪಾಕಿಸ್ತಾನಿ ಬಾಲಕಿ ಮಲಾಲ ಯೂಸಫ್ ಝಾಯಿ ಮೇಲೆ ದಾಳಿ ಮಾಡಿದ್ದ 10 ಉಗ್ರರರಿಗೆ ಪಾಕಿಸ್ತಾನ ಕೋರ್ಟ್ ಗುರುವಾರ ಜೀವಾವಧಿ ಶಿಕ್ಷೆ ವಿಧಿಸಿದೆ.

ಇಂದು ಪ್ರಕರಣದ ತೀರ್ಪು ನೀಡಿರುವ ಉಗ್ರ ನಿಗ್ರಹ ಕೋರ್ಟ್, ಮಲಾಲ ಮೇಲೆ ದಾಳಿ ಮಾಡಿದ್ದ 10 ಅಪರಾಧಿಗಳಿಗೆ 25 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

2012ರಲ್ಲಿ ಪಾಕಿಸ್ತಾನದಲ್ಲಿ ತಾಲಿಬಾನ್ ಉಗ್ರರು ಮಲಾಲ ಮೇಲೆ ಗುಂಡಿನ ದಾಳಿ ಮಾಡಿದ್ದರು. ಪ್ರಕರಣ ಸಂಬಂಧ 2014ರಲ್ಲಿ ಪಾಕಿಸ್ತಾನದ ಸೇನೆ 10 ತಾಲಿಬಾನ್ ಉಗ್ರರನ್ನು ಬಂಧಿಸಿತ್ತು.

ಶಾಲೆಗೆ ತೆರಳುವಾಗ ಸ್ವಾತ್ ಕಣಿವೆಯಲ್ಲಿ ತಾಲೀಬನರಿಂದ ಗುಂಡೇಟು ತಿಂದು, ಬದುಕುಳಿದಿದ್ದ ಮಲಾಲ ಅವರಿಗೆ ಲಂಡನ್ ನಲ್ಲಿ ಚಿಕಿತ್ಸೆ ನೀಡಲಾಗಿತ್ತು. ಮಕ್ಕಳ ಹಕ್ಕುಗಳಿಗೆ ಮತ್ತು ಶಿಕ್ಷಣಕ್ಕೆ ಹೋರಾಟಗಾರ್ತಿಯಾಗಿ ಗುರುತಿಸಿಕೊಂಡಿದ್ದ ಮಲಾಲ ಅವರಿಗೆ ೨೦೧೪ ರಲ್ಲಿ ಸ್ವೀಡನ್ ಮೂಲದ ಸಂಸ್ಥೆ ಭಾರತದ ಕೈಲಾಶ್ ಸತ್ಯಾರ್ಥಿ ಅವರ ಜೊತೆಗೆ ಮಲಾಲ ಅವರಿಗೂ ನೊಬೆಲ್ ಪ್ರಶಸ್ತಿಯನ್ನು ನೀಡಿತ್ತು.

SCROLL FOR NEXT