ಮುಂಬೈ: ಮೊದಲ ಸಾಲಿನ ಕುರ್ಚಿಗಳು ಮಹಿಳೆಯರಿಗೆ ಅಲ್ಲ ಎಂದು ಹೇಳುವ ಮೂಲಕ ಸ್ವಾಮಿ ನಾರಾಯಣ ಟ್ರಸ್ಟ್ ಮಹಿಳಾ ಪತ್ರಕರ್ತೆಯೊಬ್ಬರನ್ನು ಅವಮಾನಿಸಿದ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.
'ಗೋ ಮಾಂಸ' ವಿಚಾರ ಕುರಿತಂತೆ ಸ್ವಾಮಿ ನಾರಾಯಣ ಟ್ರಸ್ಟ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದ್ದು, ಮೊದಲ ಸಾಲಿನ ಕುರ್ಚಿಯಲ್ಲಿ ಮಹಿಳಾ ಪತ್ರಕರ್ತೆಯೊಬ್ಬರು ಆಸೀನರಾಗಲು ಬಂದಾಗ ಸ್ವಾಮಿ ನಾರಾಯಣ ಟ್ರಸ್ಟ್ ಆಯೋಜಕರು ಮಹಿಳೆಯರು ಮೊದಲ ಆಸನದಲ್ಲಿ ಕುಳಿತುಕೊಳ್ಳುವುದನ್ನು ನಮ್ಮ ಸಂಸ್ಕೃತಿ ಒಪ್ಪಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.
ಈ ಕಾರ್ಯಕ್ರಮಕ್ಕೆ ಎಲ್ಲಾ ಮಾದ್ಯಮಗಳನ್ನು ಆಹ್ವಾನಿಸಲಾಗಿತ್ತು. ಕಾರ್ಯಕ್ರಮದಲ್ಲಿ ಮೊದಲ 3 ಸಾಲು ಕುರ್ಚಿಯನ್ನು ಮಾಧ್ಯಮದವರಿಗೆಂದೇ ಕಾಯ್ದಿರಿಸಲಾಗಿತ್ತು. ಇದರಂತೆ ಖಾಸಗಿ ಮಾಧ್ಯಮದ ಮಹಿಳಾ ಪತ್ರಕರ್ತೆಯೊಬ್ಬರು ಮೊದಲ ಸಾಲಿನಲ್ಲಿ ಕುಳಿತಿದ್ದರು. ಇದನ್ನು ಕಂಡ ಸ್ವಾಮಿ ನಾರಾಯಣ ಟ್ರಸ್ಟ್ ಆಯೋಜಕರು, ಮಹಿಳೆಯರು ಮೊದಲ ಆಸನದಲ್ಲಿ ಕುಳಿತುಕೊಳ್ಳುವುದನ್ನು ನಮ್ಮ ಸಂಸ್ಕೃತಿ ಒಪ್ಪಿಕೊಳ್ಳುವುದಿಲ್ಲ ಎಂದು ಹೇಳಿ ಮಹಿಳಾ ಪತ್ರಕರ್ತೆಯನ್ನು ಹಿಂಬದಿ ಸಾಲಿಗೆ ತೆರಳುವಂತೆ ಸೂಚಿಸಿದ್ದಾರೆ.
ಈ ಘಟನೆಯಿಂದ ಮಹಿಳಾ ಪತ್ರಕರ್ತೆ ನೊಂದಿದ್ದು, ಸ್ವಾಮಿ ನಾರಾಯಣ ಟ್ರಸ್ಟ್ ಆಯೋಜಕರು ನಡೆದುಕೊಂಡ ರೀತಿಯನ್ನು ಅವರು ಖಂಡಿಸಿದ್ದಾರೆ.