ನವದೆಹಲಿ: ಮೋದಿ ಸರ್ಕಾರದ 3 ಸಾಮಾಜಿಕ ಭದ್ರತಾ ಯೋಜನೆಗಳಿಗೆ ಮೇ 9ರಂದು ಚಾಲನೆ ಸಿಗಲಿದೆ. ಪ್ರಧಾನ ಮಂತ್ರಿ ಸುರಕ್ಷಾ ವಿಮಾ ಯೋ ಜನೆ (ಪಿಎಂಎಸ್‍ಬಿವೈ) ಮತ್ತು ಪ್ರಧಾನ ಮಂತ್ರಿ ಜೀವನ್ ಜ್ಯೋತಿ ವಿಮಾ ಯೋಜನೆ (ಪಿಎಂಜೆಜೆಬಿವೈ)ಗಳನ್ನು ಪ್ರಧಾನಿ ಮೋದಿ ಕೋಲ್ಕತಾದಲ್ಲಿ ಉದ್ಘಾಟಿಸಲಿದ್ದಾರೆ. ಈ ಎರಡು ಯೋ ಜನೆಗಳನ್ನು
ಫೆ 28ರಂದು ಅರುಣ್ ಜೇಟ್ಲಿ ಬಜೆಟಲ್ಲಿ ಘೋಷಿಸಿದ್ದರು. ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ ಮತ್ತು ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆಗಳು ದುರದೃಷ್ಟವಶಾತ್ ನಡೆದ ಘಟನೆಗಳಲ್ಲಿ ಜೀವ ಕಳೆದುಕೊಂಡವರಿಗೆ ಹಾಗೂ ಅಪಘಾತದ ಕಾರಣದಿಂದ ಅಂಗವೈಕಲ್ಯಗೊಂಡವರಿಗೆ ಈ ವಿಮೆಯ ಸೌಲಭ್ಯ ಸಿಗಲಿದೆ.