ನವದೆಹಲಿ: ಗೃಹ ಸಚಿವ ರಾಜನಾಥ್ ಸಿಂಗ್ ಅವರು ಶುಕ್ರವಾರ ಸಂಸತ್ತಲ್ಲಿ ಹಿಂದೂ ಭಯೋತ್ಪಾದನೆ ವಿಚಾರ ಪ್ರಸ್ತಾಪಿಸಿದ್ದು ಕಾಂಗ್ರೆಸ್‍ನ ಆಕ್ರೋಶಕ್ಕೆ ಕಾರಣವಾಗಿದೆ.
ರಾಜನಾಥ್ ಅವರ ಈ ಹೇಳಿಕೆ ಸಂದರ್ಭೋಚಿತವಾಗಿಲ್ಲ ಎಂದು ಆರೋಪಿಸಿದೆ. ಮಾಜಿ ಗೃಹ ಸಚಿವ ಸುಶೀಲ್ ಕುಮಾರ್ ಶಿಂದೆ ಹಿಂದೂ ಭಯೋತ್ಪಾದನೆ ಬಗ್ಗೆ ಸಂಸತ್ ನಲ್ಲಿ ಯಾವತ್ತೂ ಹೇಳಿಕೆ ನೀಡಿಲ್ಲ. ಅವರು ಮಾತನಾಡಿದ್ದು ಪಕ್ಷದ ಜೈಪುರ ಸಮಾವೇಶದಲ್ಲಿ. ಅಲ್ಲದೆ, ಆ ಹೇಳಿಕೆಯನ್ನು ವಾಪಸ್ ಕೂಡ ಪಡೆದುಕೊಳ್ಳಲಾಗಿದೆ ಎಂದು ಕಾಂಗ್ರೆಸ್ ವಾದಿಸಿದೆ. ಸ್ವತಃ ಶಿಂದೆ ಶನಿವಾರ ಇದನ್ನೇ ಪುನರುಚ್ಚರಿಸಿದ್ದಾರೆ. ಸೋಮವಾರ ಸರ್ವಪಕ್ಷ ಸಭೆ ನಡೆಯಲಿದ್ದು ಇದು ಯಶಸ್ವಿಯಾಗುವ ಸಾಧ್ಯತೆ ಕಡಿಮೆ ಎಂದು ರಾಜಕೀಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.