ನವದೆಹಲಿ: ದೇಶದಲ್ಲಿ ಅಶ್ಲೀಲ ವೆಬ್‌ಸೈಟ್‌ಗಳಿಗೆ ತಡೆಯೊಡ್ಡಿರುವ ಬಗ್ಗೆ ಸಾಮಾಜಿಕ ತಾಣಗಳಲ್ಲೀಗ ಭಾರೀ ಚರ್ಚೆಯಾಗುತ್ತಿದೆ. ನಿನ್ನೆ (ಶನಿವಾರದಿಂದ) ಬಹುತೇಕ ಇಂಟರ್‌ನೆಟ್ ಸೇವಾ ಪೂರೈಕೆದಾರರು ಅಶ್ಲೀಲ ವೆಬ್‌ಸೈಟ್‌ಗಳಿಗೆ ನಿರ್ಬಂಧ ಹೇರಿದ್ದಾರೆ. ಬಿಎಸ್‌ಎನ್‌ಎಲ್, ವೊಡಾಫೋನ್, ಎಂಟಿಎನ್ ಎಲ್ ಮ1ದಲಾದ ಇಂಟರ್‌ನೆಟ್ ಸೇವಾ ಪೂರೈಕೆದಾರರು ಅಶ್ಲೀಲ ವೆಬ್‌ಸೈಟ್‌ಗಳಿಗೆ ತಡೆಯೊಡ್ಡಿದ್ದಾರೆ. ಆದರೆ ಏರ್‌ಟೆಲ್, ಟಾಟಾ ಫೋಟೋನ್ ಮೊದಲಾದ ಪೂರೈಕೆದಾರರು ಅಶ್ಲೀಲ ವೆಬ್‌ಸೈಟ್‌ಗಳಿಗೆ ನಿರ್ಬಂಧ ವಿಧಿಸಿಲ್ಲ.
ಈ ನಿರ್ಬಂಧದ ವಿರುದ್ಧ ಈಗ ಸಾಮಾಜಿಕ ತಾಣಗಳಾದ ಟ್ವಿಟರ್, ಫೇಸ್‌ಬುಕ್ ನಲ್ಲಿ ಭಾರೀ ಚರ್ಚೆ ನಡೆಯುತ್ತಿದೆ.
ಇಂಥಾ ಅಶ್ಲೀಲ ವೆಬ್‌ಸೈಟ್‌ಗಳಲ್ಲಿ ಅಶ್ಲೀಲ, ಕಾಮಪ್ರಚೋದಕ ಚಿತ್ರಗಳನ್ನು ವೀಕ್ಷಿಸುವುದು ಭಾರತದ ಸಂಸ್ಕೃತಿಗೆ ವಿರುದ್ಧವಾಗಿದೆ ಎಂದು ಕೇಂದ್ರ ದೂರ ಸಂಪರ್ಕ ಖಾತೆ ಸಚಿವ ರವಿ ಶಂಕರ್ ಪ್ರಸಾದ್ ಹೇಳಿದ್ದರು. ಅಶ್ಲೀಲ ವೆಬ್‌ಸೈಟ್‌ಗಳಿಗೆ ನಿರ್ಬಂಧ ಹೇರಬೇಕೆಂದು ಸಲ್ಲಿಸಿದ ಹಿತಾಸಕ್ತಿ ಅರ್ಜಿ ಇನ್ನೂ ಸುಪ್ರೀಂಕೋರ್ಟ್‌ನಲ್ಲಿದೆ. ಅದರ ನಡುವೆಯೇ ಯಾವುದೇ ಸೂಚನೆ ನೀಡದೆ ಅಶ್ಲೀಲ ಸೈಟ್ ಗಳಿಗೆ ನಿರ್ಬಂಧ ವಿಧಿಸಲಾಗಿದೆ.