ಎಲ್ ಪಿಜಿ 
ದೇಶ

ಯಜಮಾನಿ ಖಾತೆಗೆ ನೇರವಾಗಿ ಸಬ್ಸಿಡಿ ಹಣ

ಎಲ್ಲವೂ ಸರಿ ಹೋದಲ್ಲಿ, ಕೇಂದ್ರ ಸರ್ಕಾರದ ಸಬ್ಸಿಡಿ ಹಣ ಮನೆಯ ಯಜಮಾನಿ ಖಾತೆಗೇ ನೇರವಾಗಿ ಬಂದು ಬೀಳಲಿದೆ. ಆದರೆ ಇದು ಪೂರ್ಣವಲ್ಲ, ಸಬ್ಸಿಡಿಯ ಶೇ.5 ರಷ್ಟು ಮಾತ್ರ!..

ನವದೆಹಲಿ: ಎಲ್ಲವೂ ಸರಿ ಹೋದಲ್ಲಿ, ಕೇಂದ್ರ ಸರ್ಕಾರದ ಸಬ್ಸಿಡಿ ಹಣ ಮನೆಯ ಯಜಮಾನಿ ಖಾತೆಗೇ ನೇರವಾಗಿ ಬಂದು ಬೀಳಲಿದೆ. ಆದರೆ ಇದು ಪೂರ್ಣವಲ್ಲ, ಸಬ್ಸಿಡಿಯ ಶೇ.5 ರಷ್ಟು  ಮಾತ್ರ!

ಈ ಕುರಿತಂತೆ ಚಿಂತನೆ ಆರಂಭವಾಗಿದ್ದು, ಮನೆಯ ಹಿರಿಯ ಮಹಿಳೆಯ ಖಾತೆಗೆ ಒಂದಷ್ಟು ಹಣ ಹಾಕುವ ಸಲುವಾಗಿ ಯೋಜನೆ ರೂಪಿಸಲಾಗುತ್ತಿದೆ. ಜನರ ಖರೀದಿ ಶಕ್ತಿ ಹೆಚ್ಚಿಸುವುದು ಕೇಂದ್ರ  ಸರ್ಕಾರದ ಉದ್ದೇಶ. ಗ್ರಾಮೀಣ ಪ್ರದೇಶದಲ್ಲಿನ ಕುಟುಂಬಗಳಿಗೆ ಅಡುಗೆ ಅನಿಲ, ಆಹಾರ ಧಾನ್ಯ, ಮನೆ, ಶೌಚಾಲಯ ನಿರ್ಮಾಣ, ಪಿಂಚಣಿ, ಕೃಷಿ, ಮೀನುಗಾರಿಕೆ, ಉದ್ಯೋಗ ಖಾತ್ರಿ ಯೋಜನೆ, ನೀರಾವರಿ ಸೇರಿದಂತೆ ನಾನಾ ಇಲಾಖೆಗಳಿಂದ ಸಬ್ಸಿಡಿಗಳು ಸಿಗುತ್ತಿವೆ.

ಈ ಸಬ್ಸಿಡಿಯನ್ನು ಸರ್ಕಾರ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳಿಗೆ ನೀಡಲಿದೆ. ಈ ಸಬ್ಸಿಡಿ ಹಣದಲ್ಲಿ ಶೇ.5ರಷ್ಟನ್ನು ಕಡಿತಗೊಳಿಸಿ ಮನೆಯ ಹಿರಿಯ ಮಹಿಳೆ ಖಾತೆಗೆ ಜಮಾ ಮಾಡುವುದು ಈ  ಯೋಜನೆಯಾಗಿದೆ. ಕೇಂದ್ರ ಸರ್ಕಾರ ನಡೆಸಿರುವ ಸಾಮಾಜಿಕ, ಆರ್ಥಿಕ ಸಮೀಕ್ಷೆ ಅನುಸಾರ ದೇಶದಲ್ಲಿ 24.39 ಕೋಟಿ ಕುಟುಂಬಗಳಿವೆ. 2015-16ನೇ ಸಾಲಿನಲ್ಲಿ ಸಬ್ಸಿಡಿಗೆಂದು ರು.2.43 ಕೋಟಿ ನಿಗದಿಪಡಿಸಲಾಗಿದೆ. ಈ ಪೈಕಿ ಶೇ.5ರಷ್ಟನ್ನು ಪ್ರತಿ ಕುಟುಂಬದಲ್ಲಿ ಒಬ್ಬರ ಖಾತೆಗೆ ನೇರವಾಗಿ ಜಮಾ ಮಾಡಿದರೆ ರು.800 ಸಿಗಲಿದೆ. ಒಂದು ವೇಳೆ ಬಡವರಿಗೆ ಮಾತ್ರ ಯೋಜನೆ ಜಾರಿ  ಮಾಡಿದರೆ ಪ್ರತಿ ಕುಟುಂಬಕ್ಕೆ ರು.2,000 ಸಿಗಲಿದೆ.

ಆಹಾರ ಕೊರತೆ ಇಲ್ಲದ ದೇಶದ 300ಕ್ಕೂ ಹೆಚ್ಚು ಜಿಲ್ಲೆಗಳ ಪೈಕಿ 30 ಜಿಲ್ಲೆಗಳಲ್ಲಿ ಆಧಾರ್ ಸಂಖ್ಯೆಯ ಅಂಕಿಅಂಶಗಳನ್ನಿಟ್ಟುಕೊಂಡು ಪ್ರಾಯೋಗಿಕವಾಗಿ ಯೋಜನೆ ಜಾರಿಗೆ ತರಲಾಗುವುದು  ಎಂದು ಕೇಂದ್ರ ಸರ್ಕಾರದ ಅಧಿಕಾರಿಗಳು ತಿಳಿಸಿದ್ದಾರೆ. ಈ ಹಣವನ್ನು ನೇರವಾಗಿ ಜಮಾ ಮಾಡುವುದರಿಂದ ಸಬ್ಸಿಡಿ ವಿತರಣೆಯಲ್ಲಿನ ಅವ್ಯವಹಾರಕ್ಕೆ ತಡೆ ಬೀಳಲಿದೆ ಎಂದು ಕೆಲವು  ವಿಶ್ಲೇಷಕರು ಹೇಳಿದ್ದಾರೆ. ಯೋಜನೆ ಅನುಷ್ಠಾನದ ಕುರಿತು ಸದ್ಯಕ್ಕೆ ಏನೂ ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ.

ಬಡ ಕುಟುಂಬಗಳಿಗೆ ನಗದು ನೆರವು ನೀಡುವುದು ಅತ್ಯುತ್ತಮ ಕಲ್ಪನೆ. ಬಡವರನ್ನು ಸಬಲೀಕರಣಗೊಳಿಸಲು ಸಾಧ್ಯವಾಗಲಿದೆ ಎಂದು ಜಾಗತಿಕ ಆರ್ಥಿಕ ವಿಶ್ಲೇಷಣಾ ಸಂಸ್ಥೆ ಕ್ರಿಸಿಲ್‍ನ ಮುಖ್ಯ ಆರ್ಥಿಕ ವಿಶ್ಲೇಷಕರಾದ ಡಿ.ಕೆ.ಜೋಷಿ ಅಭಿಪ್ರಾಯಪಟ್ಟಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!