ದೇಶ

ಮುಂಬೈ ದುಬಾರಿ ನಗರ

Rashmi Kasaragodu

ನವದೆಹಲಿ: ದೇಶದ ಪ್ರಮುಖ ಒಂಬತ್ತು ನಗರಗಳ ಪೈಕಿ ಮುಂಬೈ ದುಬಾರಿ ನಗರವಾಗಿದೆ. ನಗರದಲ್ಲಿ ವಿಹಾರ ಮಾಡಲು ಚಂಡೀಘಡ ಅತ್ಯುತ್ತಮ ಮೌಲ್ಯಯುತ ನಗರ
ವಾಗಿದೆ ಎಂದು ಟ್ರಿಪ್ ಇಂಡೆಕ್ಸ್ ಸಿಟೀಸ್ ಸಮೀಕ್ಷೆ ಹೇಳಿದೆ. ಕಳೆದ ಮೂರು ವರ್ಷಗಳಿಂದಲೂ ಮುಂಬೈ ದುಬಾರಿ ನಗರಗಳ ಸಾಲಿನಲ್ಲಿ ಮೊದಲ ಸ್ಥಾನದಲ್ಲಿದೆ. ಪ್ರವಾಸ ಸಂಸ್ಥೆಯಾಗಿರುವ ಟ್ರಿಪ್ ಅಡ್ವೈಸರ್ ಈ ಸಮೀಕ್ಷೆ ರೂಪಿಸಲಿದೆ. ದೆಹಲಿ, ಮುಂಬೈ, ಬೆಂಗಳೂರು, ಚೆನ್ನೈ, ಪುಣೆ, ಹೈದರಾಬಾದ್, ಜೈಪುರ, ಕೋಲ್ಕತ್ತ ಮತ್ತು ಚಂಡೀಘಡನಗರಗಳಲ್ಲಿ ಈ ಸಮೀಕ್ಷೆ ಕೈಗೊಳ್ಳ ಲಾಗಿದೆ. ವಾರಾಂತ್ಯದ ಮೂರು ದಿನ ಮುಂಬೈನಲ್ಲಿ ಇಬ್ಬರು ಮೂರು ರಾತ್ರಿ ಉಳಿಯಲು ರು. 39,956 ವೆಚ್ಚವಾದರೆ ಚಂಡೀಘಡದಲ್ಲಿ  ರು.21,849 ಇದೆ. ಊಟದ ವೆಚ್ಚದಲ್ಲಿ ಚೆನ್ನೈ ದುಬಾರಿ ನಗರವಾಗಿದ್ದರೆ, ಚಂಡೀಘಡ ಕೊನೆ ಸ್ಥಾನದಲ್ಲಿದೆ. ಕೋಲ್ಕತ್ತ ಮತ್ತು ಬೆಂಗಳೂರು ಚೆನ್ನೈ ನಂತರದ ಸ್ಥಾನ ಗಳ ಲ್ಲಿವೆ. ಎರಡು ಮೈಲಿ ಟ್ಯಾಕ್ಸಿಯಲ್ಲಿ ಸಂಚರಿಸಲು ಮುಂಬೈನಲ್ಲಿ  ರು.949 ಆದರೆ ಚಂಡೀಘಡದಲ್ಲಿ ಈ ದರ ರು. 150 ಇದೆ. ಹೋಟೆಲ್ ಬಾಡಿಗೆ ಮೂರು ರಾತ್ರಿಗೆ ಮುಂಬೈನಲ್ಲಿ ರು. 23,092 ಇದ್ದರೆ, ಜೈಪುರದಲ್ಲಿ ಈ ವೆಚ್ಚ ರು. 10,650 ಇದೆ. ಆದರೂ ವಿಶ್ವದ ಪ್ರಮುಖ ಪ್ರವಾಸಿ ನಗರಗಳ ಸಾಲಿನಲ್ಲಿ ಮುಂಬೈ ಐದನೇ ಸ್ಥಾನದಲ್ಲಿದೆ. ಹನಾಯ್ (ವಿಯಟ್ನಾಂ), ವಾರ್ಸಾ (ಪೋಲೆಂಡ್), ಶಮ್ರ್  ಎಲ್‍ಶೇಕ್ (ಈಜಿಪ್ಟ್), ಬ್ಯಾಂಕಾಕ್ ನಂತರದ ಸ್ಥಾನದಲ್ಲಿದೆ.

SCROLL FOR NEXT