ಹರ್ದಾ: ಸೇತುವೆ ದಾಟುವಾಗ ಕಾಮಯಾನಿ ಎಕ್ಸ್ ಪ್ರೆಸ್ ಹಾಗೂ ಜನತಾ ಎಕ್ಸ್ ಪ್ರೆಸ್ ರೈಲುಗಳ ನಡುವೆ ಉಂಟಾದ ದುರ್ಘಟನೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ 29ಕ್ಕೆ ಏರಿಕೆಯಾಗಿದ್ದು, ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರುಪಾಯಿ ಹಣವನ್ನು ಮಧ್ಯಪ್ರದೇಶ ಸರ್ಕಾರ ಘೋಷಿಸಿದೆ. ಅಲ್ಲದೆ ಗಾಯಾಳುಗಳಿಗೆ ತಲಾ ರು.50 ಸಾವಿರ ಹಣವನ್ನು ನೀಡುವುದಾಗಿ ಹೇಳಿದೆ.
ಘಟನೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು ಅವರು, ಇದೊಂದು ದುರ್ಘಟನೆಯಾಗಿದ್ದು, ಘಟನೆಯಲ್ಲಿ ಸಾವನ್ನಪ್ಪಿದವರಿಗೆ 2ಲಕ್ಷ, ಗಂಭೀರವಾಗಿ ಗಾಯಗೊಂಡವಿರಗೆ ತಲಾ 50 ಸಾವಿರ ಹಾಗೂ ಸಣ್ಣಪುಟ್ಟ ಗಾಯವಾಗಿರುವವರಿಗೆ 25 ಸಾವಿರ ಹಣವನ್ನು ನೀಡಲಾಗುತ್ತದೆ. ಘಟನೆ ಕುರಿತಂತೆ ಈಗಾಗಲೇ ತನಿಖೆಗೆ ಆದೇಶಿಸಲಾಗಿದ್ದು, ಈಗಾಗಲೇ ರಕ್ಷಣಾ ಕಾರ್ಯಕ್ಕೆ ಅವಶ್ಯವಿರುವ ಎಲ್ಲಾ ಸೌಕರ್ಯಗಳನ್ನು ಒದಗಿಸಲಾಗಿದೆ. ಪ್ರಸ್ತುತ ಶೇ.90 ರಷ್ಟು ರಕ್ಷಣಾ ಕಾರ್ಯಚರಣೆ ಅಂತ್ಯವಾಗಿದ್ದು, ಅಗತ್ಯವಿದ್ದರೆ ಮತ್ತಷ್ಟು ನೆರವು ನೀಡಲಾಗುತ್ತದೆ ಎಂದು ಹೇಳಿದ್ದಾರೆ.
ಸೇತುವೆ ದಾಟುವಾಗ ಕೇವಲ ಒಂದೆರಡು ನಿಮಿಷಗಳ ಅಂತರದಲ್ಲಿ ಕಾಮಯಾನಿ ಎಕ್ಸ್ ಪ್ರೆಸ್ ಹಾಗೂ ಜನತಾ ಎಕ್ಸ್ ಪ್ರೆಸ್ ರೈಲುಗಳು ಮುಖಾಮುಖಿಯಾಗಿವೆ. ಈ ವೇಳೆ ಎರಡು ರೈಲುಗಳು ಡಿಕ್ಕಿ ಹೊಡೆದು ದುರ್ಘಟನೆ ಏರ್ಪಟ್ಟಿತ್ತು. ಘಟನೆಯಲ್ಲಿ ಈಗಾಗಲೇ 27 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರಲ್ಲದೇ, ಹಲವು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಅಪಘಾತದಲ್ಲಿ ಒಟ್ಟು 10 ಬೋಗಿಗಳು, 1 ಇಂಜಿನ್ ಮಚಕ್ ನದಿಗೆ ಉರುಳಿದ್ದು, ಬೋಗಿಗಳನ್ನು ಮೇಲಕ್ಕೆತ್ತುವ ಕಾರ್ಯಾಚರಣೆ ಭರದಿಂದ ಸಾಗಿದೆ.
ಸ್ಥಳದಲ್ಲಿ ಸಾಕಷ್ಟು ಮಳೆಯಾಗಿದ್ದರಿಂದ ರಕ್ಷಣಾಕಾರ್ಯಕ್ಕೆ ಅಡಿಯಾಗಿತ್ತು. ಹರ್ದಾದಿಂದ 25 ಕಿ.ಮೀ ದೂರದಲ್ಲಿ, ಭೊಪಾಲ್ನಿಂದ 160 ಕಿ.ಮೀ ದೂರದಲ್ಲಿ ಈ ಘಟನೆ ಸಂಭವಿಸಿದೆ. ಸ್ಥಳದಲ್ಲಿ 100ಕ್ಕೂ ಹೆಚ್ಚು ಮಂದಿ ಕಾರ್ಯಾಚರಣೆ ನಡೆಸುತ್ತಿದ್ದು, ಎನ್ಡಿಆರ್ಎಫ್ ಮತ್ತು ಸೇನಾ ಪಡೆಯ ಯೋಧರು ಬೋಗಿಗಳನ್ನು ಮೇಲಕ್ಕೆತ್ತಲು ಹರಸಾಹಸ ಪಡುತ್ತಿದ್ದಾರೆ. 300ಕ್ಕೂ ಹೆಚ್ಚು ಪ್ರಯಾಣಿಕರನ್ನು ಈಗಾಗಲೇ ರಕ್ಷಿಸಲಾಗಿದೆ. ಹಲವು ಪ್ರಯಾಣಿಕರಿಗೆ ತೀವ್ರವಾದ ಗಾಯವಾಗಿದ್ದು, ಅವರನ್ನು ಹರ್ದಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಹಾಯವಾಣಿ ಸಂಖ್ಯೆ