ಮುಂಬೈ: ವಿವಾದಿಂದಲೇ ಸದಾ ಸುದ್ದಿಯಲ್ಲಿರುವ ಸ್ವಯಂಘೋಷಿತ ದೇವ ಮಹಿಳೆ ರಾಧೇ ಮಾ ಅವರ ಮಿನಿ ಸ್ಕರ್ಟ್ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ರಾಧೇ ಮಾ ಭಕ್ತರು ಮುಜುಗರ ಪಡುವಂತಹ ಸಂದರ್ಭ ಎದುರಾಗಿದೆ.
ರಾಧೆ ಮಾ ಕೆಂಪು ಬಣ್ಣದ ಮಿನಿಸ್ಕರ್ಟ್ ಹಾಕಿರವ ಫೋಟೋವನ್ನು ನಟ ರಾಹುಲ್ ಮಹಾಜನ್ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಾಕಿದ್ದು, ಫೋಟೋದಲ್ಲಿರುವ ಈ ವ್ಯಕ್ತಿ ಯಾರೆಂದು ಗುರ್ತಿಸಿ ಎಂದು ಕೇಳಿದ್ದಾರೆ.