ನವದೆಹಲಿ: 2012ರಿಂದ ಇದುವರೆಗೆ ದಂಗೆ, ಗಡಿಯಲ್ಲಿ ಗುಂಡಿನ ದಾಳಿ ಹಾಗೂ ಉಗ್ರರ ದಾಳಿಯಲ್ಲಿ ಸುಮಾರು 200 ರಕ್ಷಣಾ ಸಿಬ್ಬಂದಿ ಮೃತಪಟ್ಟಿದ್ದಾರೆ.
ಇಂದು ರಾಜ್ಯಸಭೆಗೆ ಈ ಬಗ್ಗೆ ಲಿಖಿತ ಉತ್ತರ ನೀಡಿದ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು, 2012ರಲ್ಲಿ 61 ರಕ್ಷಣಾ ಸಿಬ್ಬಂದಿ, 2013ರಲ್ಲಿ 54, 2014ರಲ್ಲಿ 56 ಮತ್ತು ಈ ವರ್ಷ ಆಗಸ್ಟ್ 3ರವರೆಗೆ 30 ರಕ್ಷಣಾ ಸಿಬ್ಬಂದಿ ಹುತಾತ್ಮರಾಗಿದ್ದಾರೆ ಎಂದು ಹೇಳಿದರು.
ಕದನ ವಿರಾಮ ಉಲ್ಲಂಘನೆ, ಬಾರ್ಡರ್ ಆಕ್ಷನ್ ತಂಡ, ಉಗ್ರರ ವಿರುದ್ಧದ ಕಾರ್ಯಾಚರಣೆ ಸೇರಿದಂತೆ ಇತರೆ ಸಂದರ್ಭಗಳಲ್ಲಿ ಭಾರತೀಯ ಸೇನೆ ಹಲವು ಸಿಬ್ಬಂದಿಗಳನ್ನು ಕಳೆದುಕೊಂಡಿದೆ ಎಂದು ಪರಿಕ್ಕರ್ ಮಾಹಿತಿ ನೀಡಿದರು.