ಟೈಗರ್ ಮೆಮನ್ 
ದೇಶ

ಯಾಕೂಬ್ ಗಲ್ಲು ಶಿಕ್ಷೆಗೆ ಭಾರತ ತಕ್ಕ ಬೆಲೆ ತೆರಲೇಬೇಕು: ಟೈಗರ್ ಮೆಮನ್

ಮುಂಬೈ ಸರಣಿ ಸ್ಫೋಟದ ರೂವಾರಿ ಯಾಕೂಬ್ ಮೆಮನ್‌ನನ್ನು ಗಲ್ಲಿಗೇರಿಸಿದ ಭಾರತಕ್ಕೆ ತಕ್ಕ ಬೆಲೆ ತೆರುವಂತೆ ಮಾಡುತ್ತೇನೆ ಎಂದು ಮೋಸ್ಟ್ ವಾಂಟೆಡ್...

ಮುಂಬೈ: ಮುಂಬೈ ಸರಣಿ ಸ್ಫೋಟದ ರೂವಾರಿ ಯಾಕೂಬ್ ಮೆಮನ್‌ನನ್ನು ಗಲ್ಲಿಗೇರಿಸಿದ ಭಾರತ ತಕ್ಕ ಬೆಲೆ ತೆರುವಂತೆ ಮಾಡುತ್ತೇನೆ ಎಂದು ಮೋಸ್ಟ್ ವಾಂಟೆಡ್ ಕ್ರಿಮಿನಲ್ ಹಾಗೂ ಮುಂಬೈ ದಾಳಿಯ ಪ್ರಮುಖ ರೂವಾರಿ ಮುಷ್ತಾಕ್ ಟೈಗರ್ ಮೆಮನ್ ಹೇಳಿದ್ದಾನೆ.

ಜುಲೈ 30ರಂದು ನಾಗ್ಪುರದ ಕೇಂದ್ರ ಕಾರಾಗೃಹದಲ್ಲಿ ಸಹೋದರ ಯಾಕೂಬ್ ಮೆಮನ್‌ನನ್ನು ಗಲ್ಲಿಗೇರಿಸುವ ದಿನ ತನ್ನ ತಾಯಿಗೆ ಕರೆ ಮಾಡಿದ್ದ ಟೈಗರ್ ಮೆಮನ್, ಸಹೋದರನ ನೇಣಿಗೆ ಪ್ರತಿಕಾರ ತೀರಿಸಿಕೊಳ್ಳುವುದಾಗಿ ಹೇಳಿದ್ದಾನೆ.

ತನ್ನ ತಮ್ಮನ ನೇಣುಶಿಕ್ಷೆಗೆ ಸೇಡು ತೀರಿಸಿಕೊಳ್ಳದೇ ಬಿಡಲಾರೆ ಎಂದು ಟೈಗರ್ ಮೆಮನ್ ಕಿಡಿಕಾರಿದ್ದ. ನನ್ನ ತಮ್ಮನ ಗಲ್ಲುಶಿಕ್ಷೆಗೆ ಭಾರತ ಸರ್ಕಾರ ಬೆಲೆ ತೆರಲೇಬೇಕು ಎಂದು ಹೇಳಿರುವುದಾಗಿ ಆಂಗ್ಲ ದೈದಿನಕವೊಂದು ವರದಿ ಮಾಡಿದೆ. ಅಲ್ಲದೆ  ಟೈಗರ್ ಮೆಮನ್ ಕುಟುಂಬದ ಸದಸ್ಯರ ಮೇಲೆ ಹದ್ದಿನ ಕಣ್ಣಿಟ್ಟಿದ್ದ ಮುಂಬೈ ಪೊಲೀಸರಿಗೆ ಟೈಗರ್ ಮೆಮನ್ ಇಂಟರ್ನೆಟ್ ಕರೆ ಮೂಲಕ ಮಾತನಾಡಿರುವ ಸಂಭಾಷಣೆಯ ರೆಕಾರ್ಡ್ ಲಭಿಸಿರುವುದಾಗಿ ವರದಿ ತಿಳಿಸಿದೆ.

ಮಾಹೀಂನಲ್ಲಿರುವ ಅಲ್ ಹುಸೈನಿ ಕಟ್ಟಡದಲ್ಲಿರುವ ಮೆಮನ್ ಮನೆಗೆ ಜುಲೈ 30ರ ಬೆಳಗ್ಗಿನ ಜಾವ 5.35ಕ್ಕೆ ಟೈಗರ್ ಮೆಮನ್ ತನ್ನ ತಾಯಿ ಹನೀಫಾಗೆ ಕರೆ ಮಾಡಿ ಮಾತನಾಡಿದ್ದ, ಈ ಸಂದರ್ಭದಲ್ಲಿ ತಾನು ತಮ್ಮ ಯಾಕೂಬ್ ಗಲ್ಲುಶಿಕ್ಷೆಗೆ ಕೂಡಲೇ ಪ್ರತೀಕಾರ ತೀರಿಸಿಕೊಳ್ಳುವುದಾಗಿಯೂ ತಿಳಿಸಿದ್ದಾನೆ ಎಂದು ವರದಿ ಹೇಳಿದೆ.

ಏತನ್ಮಧ್ಯೆ ಟೈಗರ್ ಮೆಮನ್ ತನ್ನ ಕುಟುಂಬದವರ ಜೊತೆ ದೂರವಾಣಿ ಸಂಭಾಷಣೆ ನಡೆಸಿರುವ ಬಗ್ಗೆ ತಮಗೆ ಮಾಹಿತಿ ಇಲ್ಲ ಎಂದು ಗೃಹ ಇಲಾಖೆಯ ಅಡಿಷನಲ್ ಮುಖ್ಯ ಕಾರ್ಯದರ್ಶಿ ಕೆಪಿ ಬಕ್ಷಿ ತಿಳಿಸಿದ್ದಾರೆ. ಈ ರೀತಿ ಬೆಳವಣಿಗೆ ನಡೆದಿಲ್ಲ ಎಂಬುದಾಗಿ ಮಹಾರಾಷ್ಟ್ರ ಡಿಜಿಪಿ ಕೂಡ ಸ್ಪಷ್ಟಪಡಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

SCROLL FOR NEXT