ಪಾಕಿಸ್ತಾನದಿಂದ ಹ್ಯಾಕಿಂಗ್ ಸಾಧ್ಯತೆ: ಭಾರತದ ಸೂಕ್ಷ್ಮ ಸಚಿವಾಲಯಗಳಿಗೆ ಎಚ್ಚರಿಕೆ
ಪಾಕಿಸ್ತಾನ ಗುಪ್ತಚರ ಇಲಾಖೆಗಳಿಂದ ಹ್ಯಾಕಿಂಗ್ ನಡೆಯುವ ಸಾಧ್ಯತೆ ಇದೆ ಎಂದು ಭಾರತ ಸರ್ಕಾರ ಸೂಕ್ಷ್ಮ ಸಚಿವಾಲಯಕಗಳಿಗೆ ಎಚ್ಚರಿಕೆ ನೀಡಿದೆ.
ನವದೆಹಲಿ: ಪಾಕಿಸ್ತಾನ ಗುಪ್ತಚರ ಇಲಾಖೆಗಳಿಂದ ಹ್ಯಾಕಿಂಗ್ ನಡೆಯುವ ಸಾಧ್ಯತೆ ಇದೆ ಎಂದು ಭಾರತ ಸರ್ಕಾರ ಸೂಕ್ಷ್ಮ ಸಚಿವಾಲಯಲಗಳಿಗೆ ಎಚ್ಚರಿಕೆ ನೀಡಿದೆ.
ರಹಸ್ಯ ಮಾಹಿತಿಯನ್ನು ಪತ್ತೆಹಚ್ಚುವುದಕ್ಕಾಗಿ ಪಾಕಿಸ್ತಾನ ಗುಪ್ತಚರ ಇಲಾಖೆ ಭಾರತದ ಸಚಿವಾಲಯಗಳ ಸಂವಹನ ಜಾಲವನ್ನು ಹ್ಯಾಕ್ ಮಾಡುವ ಸಾಧ್ಯತೆ ಇದೆ ಎಂದು ಸರ್ಕಾರ ಎಚ್ಚರಿಕೆ ನೀಡಿದೆ. ರಕ್ಷಣಾ ಇಲಾಖೆ, ವಿದೇಶಾಂಗ ಇಲಾಖೆ, ನಾಗರಿಕ ವಿಮಾನಯಾನ, ಹಣಕಾಸು, ದೂರಸಂಪರ್ಕ ಹಾಗೂ ಗೃಹ ಸಚಿವಾಲಯಗಳಿಗೆ ಎಚ್ಚರಿಕೆ ಸಂದೇಶ ರವಾನಿಸಲಾಗಿದ್ದು, ಸಚಿವಾಲಯಗಳ ಕಂಪ್ಯೂಟರ್ ಗಳಲ್ಲಿರುವ ರಹಸ್ಯ ಮಾಹಿತಿಗಳನ್ನು ಆಂತರಿಕ ಸಂವಹನ ತಂತ್ರಾಂಶಕ್ಕೆ ಸೇರಿಸಲು ಸೂಚನೆ ನೀಡಲಾಗಿದೆ.
ಪಾಕಿಸ್ತಾನ ಗುಪ್ತಚರ ಇಲಾಖೆ ಭಾರತದ ಸೂಕ್ಷ್ಮ ಭದ್ರತಾ ಸಂಸ್ಥೆಗಳ, ಸಶಸ್ತ್ರ, ಅರೆ ಸೈನ್ಯದ ಕೇಂದ್ರಗಳನ್ನು ಗುರಿಯಾಗಿರಿಸಿಕೊಂಡಿದ್ದು, ಸಂವಹನ ಜಾಲವನ್ನು ಹ್ಯಾಕ್ ಮಾಡುವ ಮೂಲಕ ರಹಸ್ಯ ಮಾಹಿತಿಯನ್ನು ಪಡೆಯಲು ಯತ್ನಿಸುತ್ತಿದೆ ಎಂದು ಸರ್ಕಾರ ಹೇಳಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.