ಜಮ್ಮು: ಗಡಿಯಲ್ಲಿ ಪಾಕಿಸ್ತಾನ ಪಡೆಗಳ ಕದನ ವಿರಾಮ ಉಲ್ಲಂಘಟನೆ ಮಿತಿಮೀರುತ್ತಿದೆ. ಭಾನುವಾರ ಮತ್ತೆ ಪಾಕಿಸ್ತಾನ ಪಡೆಗಳು ಕದನ ವಿರಾಮ ಉಲ್ಲಂಘಿಸಿದ್ದು ಗಡಿಯಲ್ಲಿ ಪಾಕಿಸ್ತಾನ ಪಡೆಗಳು ಹಾಗೂ ಭಾರತೀಯ ಯೋಧರ ನಡುವೆ ಗುಂಡಿನ ಚಕಮಕಿ ಆರಂಭವಾಗಿದೆ.
ಇಂದು ಬೆಳಿಗ್ಗೆ ಪೂಂಜ್ ನ ಮಂಡಿ ಸಬ್ಜ್ಯಾನ್ ಪ್ರದೇಶದ ಬಳಿ ಪಾಕ್ ಸೈನಿಕರು ಪ್ರಚೋದಿತ ಗುಂಡಿನ ದಾಳಿ ನಡೆಸಿತ್ತು. ಇದೇ ಮೊದಲ ಬಾರಿಗೆ ಪಾಕಿಸ್ತಾನ ಪಡೆಗಳು ಗಡಿಯಲ್ಲಿ ಭಾರೀ ಪ್ರಮಾಣದ ಮಾರ್ಟರ್ ಶೆಲ್ ದಾಳಿಸಿದೆ ಎಂದು ರಕ್ಷಣಾ ಸಚಿವಾಲಯದ ವಕ್ತಾರ ಹೇಳಿದ್ದಾರೆ.
ಆಗಸ್ಟ್ ತಿಂಗಳೊಂದರಲ್ಲೇ ಈ ವರೆಗೂ 18 ಬಾರಿ ಅಪ್ರಚೋದಿತ ಗುಂಡಿನ ದಾಳಿ ನಡೆಸಿದೆ. ಕಳೆದ ಜುಲೈ ತಿಂಗಳಲ್ಲಿಯೂ ಪಾಕಿಸ್ತಾನ ಸೇನೆ ಕದನ ವಿರಾಮ ಉಲ್ಲಂಘಿಸಿ 18 ಬಾರಿ ಭಾರತೀಯ ಯೋಧರ ಮೇಲೆ ಅಪ್ರಚೋದಿತ ದಾಳಿ ನಡೆಸಿತ್ತು. ದಾಳಿಯ ಪರಿಣಾಮ 3 ಯೋಧರು ಸಾವನ್ನಪ್ಪಿದ್ದರು. ಅಲ್ಲದೆ, 14 ಮಂದಿ ಗಾಯಗೊಂಡಿದ್ದರು.