ದೇಶ

ಉಧಾಂಪುರ್, ಪಂಜಾಬ್ ಬಳಿಕ ವಿಮಾನ ಹೈಜಾಕ್‌ಗೆ ಎಲ್‌ಇಟಿ ಸಿದ್ಧತೆ

Lingaraj Badiger

ಜಮ್ಮು: ಪಂಜಾಬ್‌ನ ದಿನಾನಗರ ಹಾಗೂ ಜಮ್ಮು ಮತ್ತು ಕಾಶ್ಮೀರದ ಉಧಾಂಪುರ ದಾಳಿಯ ಬಳಿಕ ಲಷ್ಕರ್-ಇ-ತೊಯಿಬಾ ಸಂಘಟನೆಯ ಉಗ್ರರು ಈಗ ವಿಮಾನ ಅಪಹರಿಸಲು ಯೋಜನೆ ರೂಪಿಸುತ್ತಿದ್ದಾರೆ.

ವರದಿಗಳ ಪ್ರಕಾರ, ವಿಮಾನವನ್ನು ಅಪಹರಿಸುವ ಮೂಲಕ ಬಂಧಿತರಾಗಿರುವ ಸುಮಾರು 20ಕ್ಕೂ ಹೆಚ್ಚು ಉಗ್ರರ ಬಿಡುಗಡೆಗೆ ಬೇಡಿಕೆಯಿಡಲು ಎಲ್‌ಇಟಿ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ಮತ್ತು ಗಂಡಿಯಲ್ಲಿ ಭಾರಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.

ವಿಮಾನ ನಿಲ್ದಾಣಗಳ ಭದ್ರತೆ ಹೆಚ್ಚಿಸುವಂತೆ ಕೇಂದ್ರ ಗೃಹ ಸಚಿವಾಲಯ ಜಮ್ಮು ಮತ್ತು ಕಾಶ್ಮೀರ ಸರ್ಕಾರಕ್ಕೆ ಸೂಚಿಸಿದೆ ಎಂದು ಮೇಲ್ ಟುಡೇ ವರದಿ ಮಾಡಿದೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಇತ್ತೀಚಿಗಷ್ಟೇ 20ಕ್ಕೂ ಉಗ್ರರನ್ನು ಬಂಧಿಸಲಾಗಿದ್ದು, ಇನ್ನು ಹಲವು ಉಗ್ರರು ಕಣಿವೆ ರಾಜ್ಯದ ದಟ್ಟ ಅರಣ್ಯದಲ್ಲಿ ಅವಿತುಕೊಂಡಿದ್ದಾರೆ ಎನ್ನಲಾಗಿದೆ.

SCROLL FOR NEXT