ಜಮ್ಮು: ಜಮ್ಮು ಮತ್ತು ಕಾಶ್ಮೀರದ ಗಡಿಯಲ್ಲಿ ಪಾಕಿಸ್ತಾನದ ದಾಳಿ ಮತ್ತೆ ಮುಂದುವರಿದಿದ್ದು, ಇದೀಗ ಜಮ್ಮುವಿನ ಭಾರತೀಯ ವಾಸಸ್ಥಾನಗಳನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನ ಸೈನಿಕರು ಅಪ್ರಚೋದಿತ ಗುಂಡಿನ ದಾಳಿ ನಡೆಸುತ್ತಿದ್ದಾರೆಂದು ಬುಧವಾರ ತಿಳಿದುಬಂದಿದೆ.
ಕಳೆದ ರಾತ್ರಿಯಿಂದ 2 ಬಾರಿ ಕದನ ವಿರಾಮ ಉಲ್ಲಂಘಿಲಿಸಿರುವ ಪಾಕ್ ಸೈನಿಕರು, ಪೂಂಚ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಇರುವ ಭಾರತದ ಗಡಿಯಲ್ಲಿರುವ ನಾಗರೀಕ ಪ್ರದೇಶಗಳನ್ನು ಗುರಿಯಾಗಿಸಿಟ್ಟುಕೊಂಡು ಶೆಲ್ ದಾಲ್ ನಡೆಸುತ್ತಿದೆ ಎಂದು ಹೇಳಲಾಗುತ್ತಿದೆ.
ಪೂಂಚ್ ಜಿಲ್ಲೆಯ ಬಾಲಕೋಟೆ ವಲಯದಲ್ಲಿ ಗಡಿ ನಿಯಂತ್ರಣ ರೇಖೆ ಬಳಿಯಿರುವ ಠಾಣೆಗಳ ಮೇಲೆ ಕಳೆದ ರಾತ್ರಿಯಿಂದಲೇ ದಾಳಿ ನಡೆಸಲು ಪ್ರಾರಂಭಿಸಿರುವ ಪಾಕ್ ಸೈನಿಕರು. ಚಿಕ್ಕ ಶಸ್ತ್ರಾಸ್ತ್ರಗಳು, 120 ಎಂಎಂ ಹಾಗೂ 61 ಎಂಎಂ ಶೆಲ್ ಗಳ ಮೂಲಕ ದಾಳಿ ನಡೆಸಿದೆ ಎಂದು ರಕ್ಷಣಾ ಇಲಾಖೆ ವಕ್ತಾರ ಹೇಳಿದ್ದಾರೆ.
ಪಾಕಿಸ್ತಾನ ಸೈನಿಕರ ದಾಳಿಗೆ ಭಾರತೀಯ ಸೈನಿಕರು ತಕ್ಕ ಉತ್ತರ ನೀಡುತ್ತಿದ್ದು, ಘಟನೆಯಲ್ಲಿ ಯಾವುದೇ ಸಾವು ನೋವು ಸಂಭವಿಸಿರುವಂತೆ ವರದಿಯಾಗಿಲ್ಲ.