ದೇಶ

ದೆಹಲಿ ಸರ್ಕಾರದಿಂದ 1 ಜಿಬಿವರೆಗೆ ಉಚಿತ ವೈಫೈ

Lingaraj Badiger

ನವದೆಹಲಿ: ಆಮ್ ಆದ್ಮಿ ಪಕ್ಷ(ಎಎಪಿ)ದ ದೆಹಲಿ ಸರ್ಕಾರ ಚುನಾವಣೆ ವೇಳೆ ನೀಡಿದ್ದ ಉಚಿತ ವೈಫೈ ಸೌಲಭ್ಯ ಭರವಸೆಯನ್ನು ಈಡೇರಿಸಲು ಮುಂದಾಗಿದ್ದು, ತಿಂಗಳಿಗೆ 1 ಜಿಬಿವರೆಗೆ ಉಚಿತ ವೈಫೈ ಸೌಲಭ್ಯ ನೀಡಲಿದೆ.

ಮೊದಲ ಹಂತದಲ್ಲಿ ಒಂದು ವರ್ಷದೊಳಗೆ ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಕಾಲೇಜ್ ಗಳಲ್ಲಿ ಉಚಿತ ವೈಫೈ ಸೌಲಭ್ಯ ನೀಡಲಾಗುವುದು ಎಂದು ದೆಹಲಿ ಸಂವಾದ ಆಯೋಗ(ಡಿಡಿಸಿ)ದ ಉಪಾಧ್ಯಕ್ಷ ಅಶಿಶ್ ಖೇತನ್ ಅವರು ಹೇಳಿದ್ದಾರೆ.

ಎಫ್ಐಸಿಸಿಐಯಲ್ಲಿ ನಡೆದ ವೈರ್ಲೆಸ್ ಬ್ರಾಡ್ ಬ್ಯಾಂಡ್ ವಿಷನ್ ಫೋರಂನಲ್ಲಿ ಮಾತನಾಡಿದ ಖೇತನ್, ಎರಡನೇ ಹಾಗೂ ಮೂರನೇ ಹಂತದಲ್ಲಿ ಸಾರ್ವಜನಿಕವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಹಾಗೂ ಅನಧಿಕೃತಿ ಕಾಲೋನಿಗಳಲ್ಲಿ ವೈಫೈ ಸೌಲಭ್ಯ ನೀಡಲಾಗುವುದು ಎಂದರು.

ಗ್ರಾಮೀಣ ಮತ್ತು ನಗರ ಪ್ರದೇಶದ ಸುಮಾರು 275 ಗ್ರಾಮಗಳಲ್ಲಿ ಇಂಟ್ ನೆಟ್ ಸೌಲಭ್ಯ ಇಲ್ಲ ಎಂದು ಖೇತನ್ ತಿಳಿಸಿದರು.

SCROLL FOR NEXT