ನವದೆಹಲಿ: ವಿವಾದಾತ್ಮಕ ದೇವ ಮಹಿಳೆ ರಾಧೆ ಮಾ ಗೆ ಬಾಲಿವುಡ್ ಮಂದಿ ಬೆಂಬಲ ವ್ಯಕ್ತ ಪಡಿಸಿದ ಬೆನ್ನಲ್ಲೆ ಬಿಜೆಪಿಯ ಸಂಸದ ವಿಜಯ್ ಸಂಪ್ಲಾ ರಾಧೆ ಮಾ ಬೆಂಬಲಕ್ಕೆ ನಿಂತಿದ್ದಾರೆ.
ಮಧ್ಯಪ್ರದೇಶ ಸಂಸದ ವಿಜಯ್ ಸಂಪ್ಲಾ ರಾಧೇ ಮಾ ಅವರನ್ನು ರಾಧೇ ಮಾ ದೇವಿ ಎಂದು ಕರೆಯುವುದರಲ್ಲಿ ಯಾವುದೇ ತಪ್ಪು ಇಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ. ಪ್ರತಿಯೊಬ್ಬರಿಗೂ ಅವರು ಇಷ್ಟ ಪಟ್ಟ ವರನ್ನು ಹಿಂಬಾಲಿಸುವ ಪ್ರತಿಯೊಂದು ಧರ್ಮವನ್ನು ಪಾಲಿಸುವ ಹಕ್ಕಿದೆ ಎಂದು ಹೇಳಿದ್ದಾರೆ.
ಜುಲೈ 17 ರಂದು ದೆಹಲಿಯ ತಮ್ಮ ನಿವಾಸದಲ್ಲಿ ವಿಜಯ್ ಸಂಪ್ಲಾ ರಾಧೇ ಮಾ ನಡೆಸುವ ಚೌಕಿ ಎಂಬ ಹೆಸರಿನ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಎಫ್ಐಆರ್ ದಾಖಲಿದ ತಕ್ಷಣ ಯಾವುದೇ ಒಬ್ಬ ವ್ಯಕ್ತಿ ಅಪರಾಧಿಯಾಗುವುದಿಲ್ಲ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.