ದೇಶ

ಅಮ್ಜದ್ ಅಲಿ ಖಾನ್ ಅವರ ಸರೋದ್ ನಲ್ಲಿ ಹೊಸದಾಗಿ ಮೂಡಿ ಬಂದ 'ವಂದೆ ಮಾತರಂ'

Guruprasad Narayana

ಮುಂಬೈ: ಖ್ಯಾತ ಸರೋದ್ ವಾದಕ ಉಸ್ತಾದ್ ಅಮ್ಜದ್ ಅಲಿ ಖಾನ್ ಅವರು ೬೯ನೆ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ರಾಷ್ಟ್ರೀಯ ಹಾಡು 'ವಂದೆ ಮಾತರಂ' ಅನ್ನು ನೂತನವಾಗಿ ಮೊಳಗಿಸಿದ್ದಾರೆ. ತಮ್ಮ ನೆಚ್ಚಿನ ವಾದನದ ಜೊತೆ ಇದನ್ನು ಮೊಳಗಿಸಲು ಸ್ವಲ್ಪ ಕಷ್ಟವೇ ಆಯಿತು ಎಂದು ಅವರು ತಿಳಿಸಿದ್ದಾರೆ.

ಬಂಕಿಮ ಚಂದ್ರ ಅವರ ೧೮೮೨ರ ಕಾದಂಬರಿ 'ಆನಂದ ಮಠ'ದಲ್ಲಿ ಮೂಡಿ ಬಂದಿದ್ದ ತಾಯಿ ನೆಲಕ್ಕೆ ನಮಸ್ಕರಿಸುವ ಈ ಹಾಡು ಬೆಂಗಾಲಿ ಮತ್ತು ಸಂಸ್ಕೃತದಲ್ಲಿ ಬರೆಯಲಾಗಿತ್ತು.

ಪದ್ಮ ಭೂಷಣ ಪ್ರಶಸ್ತಿ ಪುರಸ್ಕೃತ ೬೯ ವರ್ಷದ ಈ ಸಂಗೀತಗಾರ ತಮ್ಮ ಪುತ್ರರಾದ ಅಮಾನ್ ಅಲಿ ಖಾನ್ ಮತ್ತು ಅಯಾನ್ ಅಲಿ ಖಾನ್ ಅವರೊಂದಿಗೆ ಈ ಸಂಗೀತ ಸೃಷ್ಟಿಸಿದ್ದು ಇದಕ್ಕೆ ಮುಂಬೈ ಮೂಲದ ನಿರ್ಮಾಣ ಸಂಸ್ಥೆ #ಫೇಮ್ ಕೈಜೋಡಿಸಿದೆ.

ಯುಟ್ಯೂಬ್ ನಲ್ಲಿ ಪ್ರಕಟವಾದ ಒಂದೆ ದಿನದಲ್ಲಿ ಈ ಸಂಗೀತ ವಿಡಿಯೋ ೫ ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಣೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡಿಂಗ್ ವಿಷಯವಾಗಿದೆ.

SCROLL FOR NEXT