ಜಮ್ಮು: ಸತತ ಮೂರು ದಿನಗಳಿಂದ ಕದನ ವಿರಾಮ ಉಲ್ಲಂಘಿಸಿ ಪಾಕಿಸ್ತಾನ ಸೇನೆ ಗಡಿಯಲ್ಲಿ ನಿರಂತರ ಗುಂಡಿನ ದಾಳಿ ನಡೆಸುತ್ತಿದೆ.
ಜಮ್ಮು ಕಾಶ್ಮೀರದ ಆರ್ ಎಸ್ ಪುರ ಸೆಕ್ಟರ್ ಬಳಿ ಪಾಕ್ ಸೇನೆ ಗುಂಡಿನ ದಾಳಿ ನಡೆಸಿದ್ದು, ಓರ್ವ ನಾಗರಿಕನಿಗೆ ಗಾಯವಾಗಿದೆ.
ಪಾಕ್ ಸೇನೆಯ ಅಪ್ರಚೋದಿತ ಗುಂಡಿನ ದಾಳಿಗೆ ಪ್ರತಿಯಾಗಿ ಭಾರತೀಯ ಸೇನೆ ಸಹ ಪ್ರತ್ಯುತ್ತರ ನೀಡುತ್ತಿದೆ.
ಕಳೆದ ಮೂರು ದಿನಗಳ ಗುಂಡಿನ ದಾಳಿಯಲ್ಲಿ ಇಲ್ಲಿಯವರೆಗೂ 6 ಮಂದಿ ಮೃತಪಟ್ಟಿದ್ದಾರೆ.