ಮುಂಬೈ: ಬಾಲಿವುಡ್ ಮೇಲೆ ಭೂಗತ ಜಗತ್ತು ಕಣ್ಣಿಟ್ಟಿರುವ ವಿಚಾರ ಹೊಸತೇನಲ್ಲ. ಬಾಲಿವುಡ್ ನ ಎಷ್ಟಯೋ ಸೆಲೆಬ್ರಿಟಿಗಳು ಭೂಗತ ಪಾತಕಿಗಳಿಂದ ಬೆದರಿಕೆ ಕರೆ ಎದುರಿಸುದ್ದುಂಟು.
ಈಗ ಗಾಯಕ ಅರಿಜಿತ್ ಸಿಂಗ್ ಅವರಿಗೆ ಬೆದರಿಕೆ ಕರೆ ಬಂದಿದೆ. ಭೂಗತ ಪಾತಕಿ ರವಿ ಪೂಜಾರಿಯು ಅರಿಜಿತ್ ಸಿಂಗ್‍ಗೆ ದೂರವಾಣಿ ಕರೆ ಮಾಡಿದ್ದು, ರು.5 ಕೋಟಿಗೆ ಬೇಡಿಕೆಯಿಟ್ಟಿದ್ದಾನೆ.
ಅಷ್ಟೇ ಅಲ್ಲ, ತನಗಾಗಿ ಎರಡು ಸ್ಟೇಜ್ ಶಯೋಗಳಲ್ಲಿ ಉಚಿತವಾಗಿ ಹಾಡುವಂತೆಯೂ ಸೂಚಿಸಿದ್ದಾನೆ. ಮೊದಲಿಗೆ ಅರಿಜಿತ್ ಅವರು ರವಿ ಪೂಜಾರಿ ವಿರುದ್ಧ ಎಫ್ಐಆರ್ ದಾಖಲಿಸಲು ಹಾಗೂ ತಮಗೆ ಪೊಲೀಸ್ ರಕ್ಷಣೆ ಪಡೆಯಲು ನಿರಾಕರಿಸಿದ್ದರಾದರೂ, ನಂತರ ಮುಂಬೈನ ಒಶಿವಾರಾ ಪೊಲೀಸ್ ಠಾಣೆಯಲ್ಲಿ ಲಿಖಿತ ದೂರು ನೀಡಿದ್ದಾರೆ.