ಸರ್ತಾಜ್ ಅಜೀಜ್ ರೊಂದಿಗೆ ಮಾತುಕತೆ ಕಾಶ್ಮೀರ ಪ್ರತ್ಯೇಕತವಾದಿಗಳಿಗೆ ಪಾಕಿಸ್ತಾನದ ಆಹ್ವಾನ 
ದೇಶ

ಎನ್ಎಸ್ಎ ಮಾತುಕತೆ: ಕಾಶ್ಮೀರಿ ಪ್ರತ್ಯೇಕತವಾದಿಗಳಿಗೆ ಪಾಕಿಸ್ತಾನದ ಆಹ್ವಾನ!

ಭಾರತ- ಪಾಕಿಸ್ತಾನ ರಾಷ್ಟ್ರೀಯ ಭದ್ರತಾ ಸಲಹೆಗಾರರ ಮಾತುಕತೆಗೂ ಮುನ್ನ ಉಭಯ ದೇಶಗಳ ಸಂಬಂಧ ಮತ್ತಷ್ಟು ಹದಗೆಡುವ ಬೆಳವಣಿಗೆಗೆ ಪಾಕಿಸ್ತಾನ ಕಾರಣವಾಗಿದೆ.

ನವದೆಹಲಿ: ಭಾರತ- ಪಾಕಿಸ್ತಾನ ರಾಷ್ಟ್ರೀಯ ಭದ್ರತಾ ಸಲಹೆಗಾರರ ಮಾತುಕತೆಗೂ ಮುನ್ನ ಉಭಯ ದೇಶಗಳ ಸಂಬಂಧ ಮತ್ತಷ್ಟು ಹದಗೆಡುವ ಬೆಳವಣಿಗೆಗೆ ಪಾಕಿಸ್ತಾನ ಕಾರಣವಾಗಿದೆ.

ಎನ್ಎಸ್ಎ ಅಜಿತ್ ದೋವಲ್ ಜತೆ ಗಡಿ ವಿಚಾರಕ್ಕೆ ಸಂಬಂಧಿಸಿದಂತೆ ಮಾತುಕತೆ ನಡೆಸಲು ಆ.23 ರಂದು ಪಾಕಿಸ್ತಾನದ ಭದ್ರತಾ ಸಲಹೆಗಾರ ಸರ್ತಾಜ್ ಅಜೀಜ್ ಭಾರತಕ್ಕೆ ಆಗಮಿಸುತ್ತಿದ್ದಾರೆ. ಇದೇ ವೇಳೆ ಭಾರತದಲ್ಲಿರುವ ಪಾಕಿಸ್ತಾನ ಹೈಕಮಿಷನರ್ ಅಬ್ದುಲ್ ಬಸಿತ್  ಸರ್ತಾಜ್ ಅಜೀಜ್ ರನ್ನು ಭೇಟಿ ಮಾಡಲು ಕಾಶ್ಮೀರ ಪ್ರತ್ಯೇಕತಾವಾದಿಗಳಿಗೆ ಆಹ್ವಾನ ಕಳಿಸಿದ್ದಾರೆ.

ಕಾಶ್ಮೀರ ಪ್ರತ್ಯೇಕತಾವಾದಿ ನಾಯಕ ಸಯೀದ್ ಅಲಿ ಷಾ ಗಿಲಾನಿ, ಮಿರ್ವೈಜ್ ಉಮರ್ ಫಾರೂಕ್, ಸೇರಿದಂತೆ ಹಲವು ನಾಯಕರಿಗೆ ಆಹ್ವಾನ ನೀಡಲಾಗಿದ್ದು, ಪಾಕ್ ರಾಷ್ಟ್ರೀಯ ಭದ್ರತಾ ಸಲಹೆಗಾರ ಸರ್ತಾಜ್ ಅಜೀಜ್ ಅವರನ್ನು ಭೇಟಿ ಮಾಡಲು ಅವಕಾಶ ನೀಡಲಾಗಿದೆ.  

ಕಳೆದ ವರ್ಷವೂ ಪಾಕಿಸ್ತಾನ ಹೈ ಕಮಿಷನರ್ ಬದುಲ್ ಬಸಿತ್  ಇದೇ ರೀತಿಯಲ್ಲಿ ಪ್ರತ್ಯೇಕತಾವಾದಿಗಳೊಂದಿಗೆ ಸಭೆ ನಡೆಸಿದ್ದರ ಪರಿಣಾಮ ಭಾರತ ಸರ್ಕಾರ ಪಾಕಿಸ್ತಾನದೊಂದಿಗೆ ನಡೆಯಬೇಕಿದ್ದ ಕಾರ್ಯದರ್ಶಿಗಳ ಮಟ್ಟದ ಮಾತುಕತೆಯನ್ನು ರದ್ದುಗೊಳಿಸಿ ಪಾಕ್ ಕ್ರಮವನ್ನು ಪ್ರತಿಭಟಿಸಿತ್ತು. ಈಗ ರಾಷ್ಟ್ರೀಯ ಭದ್ರತಾ ಸಲಹೆಗಾರರ ಮಾತುಕತೆಗೂ ಮುನ್ನ ಪಾಕಿಸ್ತಾನ ತನ್ನ ಹಳೆಯ ಚಾಳಿಯನ್ನೇ ಮುಂದುವರೆಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಪಕ್ಷದ ಹಿತಕ್ಕಾಗಿ ನಾಗೇಂದ್ರ ಯಾವುದೇ ತ್ಯಾಗಕ್ಕೂ ಸಿದ್ಧ, ಆದ್ರೆ...: ಹೈಕಮಾಂಡ್ ಭೇಟಿ ಬಳಿಕ CM ಡಿಕೆ ಶಿವಕುಮಾರ್

‘ಬರೆಯೋದೊಂದು, ಶೂಟ್ ಮಾಡೋದು ಇನ್ನೊಂದು’: ಟಾಕ್ಸಿಕ್ ರಿಲೀಸ್ ಬೆನ್ನಲ್ಲೇ ಗೀತು ಮೋಹನ್‌ದಾಸ್ ಹಳೆ ವಿಡಿಯೋ ವೈರಲ್; ಅದಕ್ಕೇನೆ ಸಿನಿಮಾ ಹೀಗಿದೆ ಎಂದ ನೆಟ್ಟಿಗರು!

kerala: ಸ್ಕೂಟರ್‌ಗೆ ಡಿಕ್ಕಿ ತಪ್ಪಿಸಲು ಹೋಗಿ ಬಸ್ ಪಲ್ಟಿ: 4 ಮಂದಿಗೆ ಗಂಭೀರ ಗಾಯ, Video

ತುಮಕೂರು: ದಯಾಮರಣ ಕೋರಿದ್ದ ಮಹಿಳೆ ಇಬ್ಬರು ಮಕ್ಕಳೊಂದಿಗೆ ಆತ್ಮಹತ್ಯೆ; ಕಾರಣ ನಿಗೂಢ!

ನಿಂಬೆಹಣ್ಣು ಕತ್ತರಿಸಿ, ಮಳೆ ನಿಲ್ಲಿಸಿದೆ: ವಿವಾದವನ್ನು ಮೈ ಮೇಲೆ ಎಳೆದುಕೊಂಡ ಬಿಜೆಪಿ ಸಂಸದ! ಕಾಂಗ್ರೆಸ್, ನೆಟ್ಟಿಗರ ಲೇವಡಿ