ನವದೆಹಲಿ: ಭಾರತ - ಪಾಕಿಸ್ತಾನ ರಾಷ್ಟ್ರೀಯ ಭದ್ರತಾ ಸಲಹೆಗಾರರ ಮಾತುಕತೆಗೆ ಈ ವರೆಗೂ ಕಾಂಗ್ರೆಸ್ ನಿಂದ ವಿರೋಧ ವ್ಯಕ್ತವಾಗಿತು, ಈಗ ಹಿರಿಯ ಬಿಜೆಪಿ ಮುಖಂಡ ಯಶ್ವಂತ್ ಸಿನ್ಹಾ ಸಹ ಎನ್ಎಸ್ಎ ಮಾತುಕತೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.
ಭಾರತ ಪಾಕಿಸ್ತಾನದೊಂದಿಗೆ ಎಷ್ಟೇ ಶಾಂತಿಯುತ ಮಾತುಕತೆ ನಡೆಸಿದರೂ ಉಪಯೋಗವಿಲ್ಲ, ಭಾರತ, ಪಾಕಿಸ್ತಾನ ಎನ್ಎಸ್ಎ ಸರ್ತಾಜ್ ಅಜೀಜ್ ರೊಂದಿಗೆ ಮಾತುಕತೆ ನಡೆಸುವುದು ಕಿವುಡರ ಜೊತೆ ಮಾತುಕತೆ ನಡೆಸಿದಂತೆ ಎಂದು ಸಿನ್ಹಾ ಅಭಿಪ್ರಾಯಪಟ್ಟಿದ್ದಾರೆ.
ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದ ವಿದೇಶಾಂಗ ಸಚಿವರಾಗಿದ್ದ ಯಶ್ವಂತ್ ಸಿನ್ಹಾ, ಕಿವುಡರೊಂದಿಗೆ ಮಾತುಕತೆ ನಡೆಸುವುದರಿಂದ ಯಾವುದೇ ಸಕಾರಾತ್ಮಕ ಫಲಿತಾಂಶ ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಹೇಳ್ದಿದಾರೆ. ಗುಂಡಿನ ದಾಳಿ- ದ್ವಿಪಕ್ಷೀಯ ಮಾತುಕತೆ ಒಟ್ಟಿಗೆ ನಡೆಯಲು ಸಾಧ್ಯವಿಲ್ಲ ಎಂದು ಎಚ್ಚರಿಕೆ ನೀಡಿದರೂ ಪಾಕಿಸ್ತಾನ ಗಡಿ ಪ್ರದೇಶದಲ್ಲಿ ಕದನ ವಿರಾಮ ಉಲ್ಲಂಘನೆ ಮಾಡುತ್ತಿದೆ. ಅದ್ದರಿಂದ ಮಾತುಕತೆ ರದ್ದುಗೊಳಿಸುವುದೇ ಉತ್ತಮ ಎಂದು ಯಶ್ವಂತ್ ಸಿನ್ಹಾ ಅಭಿಪ್ರಾಯಪಟ್ಟಿದ್ದಾರೆ.
ಪಾಕಿಸ್ತಾನದ ಭದ್ರತಾ ಸಲಹೆಗಾರ ಸರ್ತಾಜ್ ಅಜೀಜ್ ಅವರೊಂದಿಗೆ ಮಾತುಕತೆ ನಡೆಸಲು ಪಾಕಿಸ್ತಾನ ಕಾಶ್ಮೀರಿ ಪ್ರತ್ಯೇಕತಾವದಿಗಳಿಗೆ ಆಹ್ವಾನ ನೀಡಿದೆ.