ದೇಶ

ಚುನಾವಣೆಯಲ್ಲಿ ಬಿಜೆಪಿಗೆ ಮುನ್ನಡೆ

Rashmi Kasaragodu

ಜೈಪುರ: ಮಧ್ಯಪ್ರದೇಶದ ಬಳಿಕ ಈಗ ರಾಜಸ್ಥಾನದ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆ ಯಲ್ಲೂ ಬಿಜೆಪಿ ಮೇಲುಗೈ ಸಾಧಿಸಿದೆ. 129ರಲ್ಲಿ 69 ಸ್ಥಾನಗಳಲ್ಲಿ ಸದ್ಯ ಬಿಜೆಪಿಯೇ ಮುನ್ನಡೆ ಸಾಧಿಸಿದೆ. ಆದರೆ, ಮುಖ್ಯಮಂತ್ರಿ ವಸುಂಧರಾ ರಾಜೇ ಸ್ವಕ್ಷೇತ್ರವಾದ ಝಾಲ ವಾರ್ ಹಾಗೂ ಧೋಲ್ಪುರದಲ್ಲಿ ಉಂಟಾಗಿರುವ ಹೀನಾಯ ಸೋಲು ಪಕ್ಷಕ್ಕೆ ಭಾರಿ ಮುಖಭಂಗವುಂಟು ಮಾಡಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಸಂಪೂರ್ಣ ನಾಮಾವಶೇಷ ಗೊಂಡಿದ್ದ ಕಾಂಗ್ರೆಸ್ ಈ ಚುನಾವಣೆಯಲ್ಲಿ ಉತ್ತಮ ಸಾಧನೆ ತೋರಿದೆ. ಸುಮಾರು 40 ಸ್ಥಳೀಯ ಸಂಸ್ಥೆಗಳಲ್ಲಿ ನೇರವಾಗಿ ಅಥವಾ ಪರೋಕ್ಷವಾಗಿ ಅಧಿಕಾರಕ್ಕೇರುವಲ್ಲಿ ಪಕ್ಷ ಯಶಸ್ವಿಯಾಗಿದೆ. ಇನ್ನೂ  17 ಸ್ಥಳೀಯ ಸಂಸ್ಥೆಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಹತ್ತಿರದ ಸ್ಪರ್ಧೆ ನಡೆಯುತ್ತಿದೆ.

SCROLL FOR NEXT