ದೇಶ

ಶೈಕ್ಷಣಿಕ ಸಾಲಕ್ಕೆ ಪೋರ್ಟಲ್

Rashmi Kasaragodu

ನವದೆಹಲಿ: ಶಿಕ್ಷಣ ಸಾಲ ಪಡೆಯುವ ವಿದ್ಯಾರ್ಥಿಗಳಿಗಾಗಿ ಕೇಂದ್ರ ಸರ್ಕಾರ ಗುರುವಾರ ಪ್ರತ್ಯೇಕ ಪೋರ್ಟಲ್  vidyalakshmi.co.in ಆರಂಭಿಸಿದೆ. ಎಸ್‍ಬಿಐ,
ಐಡಿಬಿಐ ಬ್ಯಾಂಕ್, ಬ್ಯಾಂಕ್ ಆಫ್ ಇಂಡಿಯಾ ಸೇರಿದಂತೆ ಐದು ಬ್ಯಾಂಕ್‍ಗಳು ಈ ಪೋರ್ಟಲ್‍ನ್ನು ತಮ್ಮ ವಹಿವಾಟು ಕಾರ್ಯಾಚರಣೆಯಲ್ಲಿ ಅಳವಡಿಸಿಕೊಂಡಿವೆ.ಈ ಪೋರ್ಟಲ್ ಸ್ವಾತಂತ್ರ್ಯ ದಿನಾಚರಣೆಯಂದೇ ಆರಂಭಿಸಲಾಯಿತು ಎಂದು ಕೇಂದ್ರ ಹಣಕಾಸು ಸಚಿವಾಲಯದ ಹೇಳಿಕೆ ತಿಳಿಸಿದೆ.ಹಣಕಾಸು ಸೇವೆ, ಹಣಕಾಸು ಸಚಿವಾಲಯ, ಉನ್ನತ ಶಿಕ್ಷಣ ಸಚಿವಾಲಯ, ಮಾನವ ಸಂಪನ್ಮೂಲ ಸಚಿವಾಲಯ ಮತ್ತು ಭಾರತೀಯ ಬ್ಯಾಂಕ್‍ಗಳ ಒಕ್ಕೂಟದ ಮಾರ್ಗಸೂಚಿ ಅನುಸಾರಎನ್‍ಎಸ್‍ಡಿಎಲ್ ಇ-ಗೌವರ್ನೆನ್ಸ್ ಈ ಪೋರ್ಟಲ್ ಅಭಿವೃದ್ಧಿಪಡಿಸಿದೆ. ಈ ಪೋರ್ಟಲ್ ವಿವಿಧ ಬ್ಯಾಂಕ್‍ಗಳ ಶೈಕ್ಷಣಿಕ ಸಾಲದ ಕುರಿತು ಮಾಹಿತಿ ನೀಡಲಿದೆ. ಎಲ್ಲ ಬ್ಯಾಂಕ್‍ಗಳಿಗೆ ಒಂದೇ ರೀತಿಯ ಅರ್ಜಿ ನಮೂನೆ ಇರಲಿದ್ದು ಹಲವು ಬ್ಯಾಂಕ್‍ಗಳಲ್ಲಿ ಸಾಲಕ್ಕಾಗಿ ಅರ್ಜಿ ಸಲ್ಲಿಸಬಹುದು. ಬ್ಯಾಂಕ್ ಗಳು ಈ ಅರ್ಜಿಗಳನ್ನು ಡೌನ್ ಲೋಡ್ ಮಾಡಿಕೊಳ್ಳುವ ವ್ಯವಸ್ಥೆ ಇದೆ.ಸಾಲ ನೀಡುವ ಪ್ರಕ್ರಿಯೆ ಯಾವ ಹಂತದಲ್ಲಿದೆ ಎಂಬ ಮಾಹಿತಿ ಸಿಗಲಿದೆ. ಸಾಲಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೂ ಇಮೇಲ್ ಮೂಲಕ ಪರಿಹಾರ ಪಡೆಯಬಹುದಾಗಿದೆ. ರಾಷ್ಟ್ರೀಯ ಸ್ಕಾಲರ್‍ಶಿಪ್ ಪೋರ್ಟಲ್ ಜೊತೆ ಮತ್ತು ಸರ್ಕಾರಿ ಸ್ಕಾಲರ್‍ಶಿಪ್ ಅರ್ಜಿಗಳ ಜೊತೆಗೆ ಇದನ್ನು ಲಿಂಕ್ ಮಾಡಲಾಗಿದೆ.

SCROLL FOR NEXT