ಶ್ರೀನಗರ: ಜಮ್ಮು ಕಾಶ್ಮೀರದ ಉಧಂಪುರ ಮೇಲಿನ ಭಯೋತ್ಪಾದಕರ ದಾಳಿಯಲ್ಲಿ ಬಂಧಿತನಾದ ಪಾಕಿಸ್ತಾನದ ಉಗ್ರ ನಾವೇದ್ ಯಾಕೂಬ್‌ನ ಸಹಚರ ಉಗ್ರ ಅಬು ಒಕಾಶ ಹಾಗೂ ಅಬು ಖಾಸಿಮ್ ಸುಳಿವು ನೀಡಿದವರಿಗೆ ರು. 10 ಲಕ್ಷ ನಗದು ಬಹುಮಾನ ನೀಡುವುದಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಶುಕ್ರವಾರ ಘೋಷಿಸಿದೆ.
ಉಧಂಪುರ ದಾಳಿ ನಡೆಸಿದಾಗ ಪಾಕ್ ಉಗ್ರ ನಾವೆದ್ ಜತೆಗಿದ್ದ ಇತರೆ ಇಬ್ಬರು ಉಗ್ರರ ರೇಖಾಚಿತ್ರವನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ಆಗಸ್ಟ್ 18 ರಂದು ಬಿಡುಗಡೆ ಮಾಡಿತ್ತು. ಸದ್ಯ ತಲೆ ಮರೆಸಿಕೊಂಡಿರುವ ಅಬು ಖಾಸಿಮ್ ಹಾಗೂ ಅಬು ಒಕಾಶನ ಸುಳಿವು ನೀಡಿದವರಿಗೆ 10 ಲಕ್ಷ ರು. ಬಹುಮಾನ ಘೋಷಿಸಲಾಗಿದೆ.