ಶ್ರೀನಗರ: ಯುವಕರ ಗುಂಪೊಂದು ತ್ರಿವರ್ಣ ಧ್ವಜವನ್ನು ಸುಟ್ಟು ಪಾಕಿಸ್ಥಾನ ಹಾಗೂ ಉಗ್ರ ಸಂಘಟನೆ ಇಸಿಸ್ ಧ್ವಜವನ್ನು ಹಾರಿಸಿ ದುಷ್ಕೃತ್ಯ ಎಸಗಿದ್ದಾರೆ.
ಶುಕ್ರವಾರದ ಪ್ರಾರ್ಥನೆಯ ಬಳಿಕ ಯುವಕರ ಗುಂಪೊಂದು ನೌಹತ್ತಾ ಎಂಬ್ಲಿನ ಜಾಮಿಯಾ ಮಸೀದಿಯ ಬಳಿ ಇರುವ ಶಾಪಿಂಗ್ ಆರ್ಕೇಡ್‌ನ ಸೂರಿನ ಮೇಲೆ ತ್ರಿವರ್ಣ ಧ್ವಜ ಮತ್ತು ಪಿಡಿಪಿ ಧ್ವಜವನ್ನು ಸುಟ್ಟು ಹಾಕಿದ್ದಾರೆ. ಅಲ್ಲದೆ ಇಸಿಸ್ ಮತ್ತು ಪಾಕ್ ಧ್ವಜವನ್ನು ಹಾರಿಸಿದ್ದು, ಉದ್ರಿಕ್ತ ಪರಿಸ್ಥಿತಿ ತಲೆದೋರುವಂತೆ ಮಾಡಿದರು. ಪರಿಣಾಮವಾಗಿ ಪ್ರತಿಭಟನಕಾರರು ಮತ್ತು ಭದ್ರತಾ ಪಡೆಗಳ ನಡುವೆ ಘರ್ಷಣೆ ಉಂಟಾಯಿತು.
ಈ ವೇಳೆ ಕೆಲ ಪ್ರತಿಭಟನಕಾರರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದರು. ಆದರೆ ಪೊಲೀಸರು ಕೆಲವು ಅಶ್ರುವಾಯು ಕೋಶಗಳನ್ನು ಸಿಡಿಸಿ ಪ್ರತಿಭಟಕಾರರನ್ನು ಚದುರಿಸುವಲ್ಲಿ ಸಫಲರಾದರು.