ಗೃಹ ಸಚಿವ ರಾಜನಾಥ್ ಸಿಂಗ್ 
ದೇಶ

ವಿಜ್ಞಾನ, ತಂತ್ರಜ್ಞಾನಕ್ಕೆ ಸಂಸ್ಕೃತ ಅತ್ಯಂತ ಉಪಯುಕ್ತ ಭಾಷೆ: ಗೃಹ ಸಚಿವ ರಾಜನಾಥ್ ಸಿಂಗ್

ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ಸಂಸ್ಕೃತ ಭಾಷೆ ಪ್ರಚಾರವನ್ನು ಸಮರ್ಥಿಸಿಕೊಂಡಿದ್ದು, ಸಂಸ್ಕೃತವನ್ನು ವಿದೇಶಿ ವಿದ್ವಾಂಸರು ಸಹ ವೈಜ್ಞಾನಿಕ ಭಾಷೆ ಎಂದು ಒಪ್ಪಿಕೊಂಡಿದ್ದಾರೆ ಎಂದು ಹೇಳಿದ್ದಾರೆ.

ಲಖನೌ: ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ಸಂಸ್ಕೃತ ಭಾಷೆ ಪ್ರಚಾರವನ್ನು ಸಮರ್ಥಿಸಿಕೊಂಡಿದ್ದು, ಸಂಸ್ಕೃತವನ್ನು ವಿದೇಶಿ ವಿದ್ವಾಂಸರು ಸಹ ವೈಜ್ಞಾನಿಕ ಭಾಷೆ ಎಂದು ಒಪ್ಪಿಕೊಂಡಿದ್ದಾರೆ ಎಂದು ಹೇಳಿದ್ದಾರೆ.

ಸಂಸ್ಕೃತವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಲಖನೌದಲ್ಲಿ ಹಮ್ಮಿಕೊಳ್ಳಲಾಗಿದ್ದ 'ಮಹಾಭಿಯಾನಂ' ಕಾರ್ಯಕ್ರಮದಲ್ಲಿ ಮಾತನಾಡಿದ ರಾಜನಾಥ್ ಸಿಂಗ್ ಸಂಸ್ಕೃತದ ಮಹಾಕಾವ್ಯಗಳಲ್ಲಿರುವ ಕಠಿಣವಾದ ತಾತ್ವಿಕ ಪ್ರಶ್ನೆಗಳಿಗೆ ಉತ್ತರಿಸಲು ಸಂಸ್ಕೃತಕ್ಕಿಂತ ಮತ್ತೊಂದು ಭಾಷೆಗೆ ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಕಲೆ, ಸಾಹಿತ್ಯ, ವಿಜ್ಞಾನ, ತಂತ್ರಜ್ಞಾನ ಯಾವುದೇ ವಿಷಯದಲ್ಲೂ ಸಹ ಸಂಸ್ಕೃತ ಅತ್ಯಂತ ಪ್ರಯೋಜನಕಾರಿ ಭಾಷೆ ಎಂಬುದನ್ನು ಜನರು ಇತ್ತೀಚಿನ ದಿನಗಳಲ್ಲಿ ಒಪ್ಪುತ್ತಿದ್ದಾರೆ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.

ಸೂಪರ್ ಕಂಪ್ಯೂಟರ್ ನ್ನು ನಿರ್ಮಾಣ ಮಾಡಬೇಕಾದರೆ ನಾಸಾ ಸಹ ಸಂಸ್ಕೃತ ಇದಕ್ಕೆ ಸರಿಹೊಂದುವ ಉತ್ತಮ ಭಾಷೆ ಎಂದು ಅಭಿಪ್ರಾಯಪಟ್ಟಿದೆ. ಸಂಸ್ಕೃತದಿಂದ ಭಾರತೀಯರಾದ ನಾವೇ ದೂರ ಸರಿಯುತ್ತಿರುವುದು ಅಣಕ. ಇಂಗ್ಲೀಷ್ ಅಥವಾ ಇನ್ನಿತರ ಭಾಷೆಗಳಂತೆ ಗೊಂದಲಕ್ಕೀಡು ಮಾಡುವ ಕಾಗುಣಿತ, ಉಚ್ಚಾರಣೆ ಸಮಸ್ಯೆ ಸಂಸ್ಕೃತ ಭಾಷೆಗೆ ಇಲ್ಲ. ಅಮೇರಿಕಾ, ಯುಕೆಗಳ ಯುಅವಕರೂ ಸಂಸ್ಕೃತ ಅಧ್ಯಯನಕ್ಕೆ ಆಸಕ್ತಿ ತೋರುತ್ತಿದ್ದಾರೆ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.

ಇಚ್ಛಾ ಶಕ್ತಿ ಇದ್ದಾರೆ, ಸಂಸ್ಕೃತದ ಜ್ಞಾನವನ್ನು ಎಲ್ಲಾ ಮನೆಗಳಿಗೂ ತಲುಪಿಸಬಹುದು ಎಂದು ಕೇಂದ್ರ ಗೃಹ ಸಚಿವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

KPSC ನೇಮಕಾತಿ ಹಗರಣ: ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್, ಸದಸ್ಯೆ ಗೀತಾ 13 ದಿನ ED ಕಸ್ಟಡಿಗೆ

ರಾಜ್ಯದಲ್ಲಿ ಶೇ. 90ರಷ್ಟು ಬೆಳೆ ಹಾನಿ: ಪರಿಸ್ಥಿತಿ ಗಂಭೀರ - DCM ಪರಮೇಶ್ವರ

'ಸತ್ತವರಿಂದಲೂ ವೋಟಿಂಗ್, SIR ಉಪಯೋಗಗಳ ಕುರಿತು ಚೆನ್ನಿತ್ತಲಾರನ್ನು ಕೇಳಿ': ರಾಹುಲ್ ಗಾಂಧಿಗೆ ಸುರೇಶ್ ಗೋಪಿ

'ನನ್ನ ವಿರುದ್ಧ 100 ಎಫ್‌ಐಆರ್‌ ದಾಖಲಿಸಿ ಹೆದರಲ್ಲ, ಪ್ರತಿಯೊಂದೂ ನನಗೆ ಪದಕ': ರಾಹುಲ್ ಗಾಂಧಿ