ಸಾಂದರ್ಭಿಕ ಚಿತ್ರ 
ದೇಶ

ಗಲ್ಲು ಶಿಕ್ಷೆ ವಿಚಾರ: ಮುಂದಿನ ವಾರ ವರದಿ

ದೇಶದಲ್ಲಿ ಮರಣದಂಡನೆ ಶಿಕ್ಷೆ ಮುಂದುವರಿಸಬೇಕೇ ಅಥವಾ ಬೇಡವೇ ಎಂಬ ಸಂಬಂಧ ಮುಂದಿನ ವಾರ ಕಾನೂನು...

ನವದೆಹಲಿ: ದೇಶದಲ್ಲಿ ಮರಣದಂಡನೆ ಶಿಕ್ಷೆ ಮುಂದುವರಿಸಬೇಕೇ ಅಥವಾ ಬೇಡವೇ ಎಂಬ ಸಂಬಂಧ ಮುಂದಿನ ವಾರ ಕಾನೂನು ಆಯೋಗ ವರದಿ ನೀಡಲಿದೆ.

ಮುಂಬೈ ಸರಣಿ ಸ್ಫೋಟ ಆರೋಪಿ ಯಾಕೂಬ್ ಮೆನನ್ ಗಲ್ಲು ಶಿಕ್ಷೆ ಜಾರಿ ವೇಳೆ ದೇಶಾದ್ಯಂತ ಗಲ್ಲುಶಿಕ್ಷೆ ವಿರೋಧಿ ಆಂದೋಲನಗಳು ಎದ್ದ ಈ ಸಂದರ್ಭದಲ್ಲೇ ವರದಿ ಹೊರಬೀಳುತ್ತಿರುವುದು ಕುತೂಹಲ ಮೂಡಿಸಿದೆ. ಮುಂದಿನ ವಾರ ಕಾನೂನು ಆಯೋಗ ಸುಪ್ರೀಂಕೋರ್ಟ್‍ಗೆ ಈ ವರದಿ ಸಲ್ಲಿಸಲಿದ್ದು, ಒಂದು ಪ್ರತಿಯನ್ನು ಕೇಂದ್ರ ಕಾನೂನು ಸಚಿವಾಲಯಕ್ಕೂ ನೀಡಲಿದೆ.

ಈ ವರದಿಯನ್ನು ಪರಿಶೀಲನೆ ಮಾಡಿದ ಬಳಿಕ ಕೇಂದ್ರ ಸರ್ಕಾರ ಸಂಸತ್‍ನಲ್ಲಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ. ಮೂರು ವರ್ಷಗಳ ಹಿಂದೆ ಸುಪ್ರೀಂಕೋರ್ಟ್ ಕಾನೂನು ಆಯೋಗಕ್ಕೆ ಈ ಸಂಬಂಧ ಸೂಚನೆ ನೀಡಿತ್ತು. ದೇಶದಲ್ಲಿ ಮರಣದಂಡನೆ ಶಿಕ್ಷೆ ಬೇಕೋ ಅಥವಾ ಬೇಡವೋ ಎಂಬ ಬಗ್ಗೆ ಯಾವುದೇ ವೈಜ್ಞಾನಿಕ ಅಧ್ಯಯನಗಳಾಗಿಲ್ಲ.

ಅಲ್ಲದೆ ಪ್ರಸಕ್ತ ಸನ್ನಿವೇಶದಲ್ಲಿ ಗಲ್ಲುಶಿಕ್ಷೆಯ ಪ್ರಸ್ತುತತೆ ಇದೆಯೇ ಎಂಬ ಬಗ್ಗೆಯೂ ಅಧ್ಯಯನ ನಡೆಸುವಂತೆ ಸುಪ್ರೀಂಕೋರ್ಟ್ ಹೇಳಿತ್ತು. ಚರ್ಚೆ ಅಗತ್ಯ: ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ, ರಾಜ್ಯಸಭೆ ಸದಸ್ಯೆ ಕನ್ನಿಮೋಳಿ, ಮಹಾತ್ಮಾ ಗಾಂಧಿ ಮೊಮ್ಮೊಗ ಗೋಪಾಲಕೃಷ್ಣ ಗಾಂಧಿ ಸೇರಿದಂತೆ ಹಲವಾರು ನಾಯಕರು ದೇಶದಲ್ಲಿ ಗಲ್ಲುಶಿಕ್ಷೆ ಬೇಡ ಎಂದೇ ವಾದಿಸಿದ್ದರು.

ಅಲ್ಲದೆ ಕಳೆದ ತಿಂಗಳಷ್ಟೇ ಈ ಬಗ್ಗೆ ಕಾನೂನು ಆಯೋಗ ಗಲ್ಲು ಶಿಕ್ಷೆ ಬಗ್ಗೆ ಚರ್ಚೆಯೊಂದನ್ನೂ ನಡೆಸಿತ್ತು. ಅದರಲ್ಲಿ ಈ ಮೂವರು ನಾಯಕರು ಗಲ್ಲುಶಿಕ್ಷೆಯ ಅಪ್ರಸ್ತುತೆ ಬಗ್ಗೆ ವಾದಿಸಿದ್ದರು. ಗಲ್ಲುಶಿಕ್ಷೆ ಪರ ಸುಪ್ರೀಂಕೋರ್ಟ್‍ನ ಬಾರ್ ಅಸೋಸಿಯೇಶನ್‍ನ ದುಶ್ಯಂತ್ ದವೆ ಪ್ರತಿಪಾದಿಸಿದ್ದರು. ಕಾನೂನು ಆಯೋಗ ಈ ಎಲ್ಲಾ ಅಂಶಗಳನ್ನೂ ವರದಿಯಲ್ಲಿ ಸೇರಿಸಿದೆ. ಜತೆಗೆ ತಮಗೆ ಬಂದಿರುವ ಎಲ್ಲಾ ಸಲಹೆಗಳ ಬಗ್ಗೆಯೂ ಪರಿಶೀಲನೆ ನಡೆಸಿದೆ. ಸದ್ಯದಲ್ಲೇ ವರದಿಯನ್ನು ಬಿಡುಗಡೆ ಮಾಡಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಜ್ಯ ಸರ್ಕಾರಕ್ಕೆ 'ಸ್ಟಿಂಗ್ ಆಪರೇಷನ್' ಆತಂಕ: ಟ್ರ್ಯಾಪ್‌ಗೆ ಯತ್ನ ನಡೆಯುತ್ತಿದೆ, ಹುಷಾರಾಗಿರಿ ; 5 ಸಚಿವರಿಗೆ ಡಿಕೆಶಿ ಎಚ್ಚರಿಕೆ ಸಂದೇಶ

‘ವೈಯಕ್ತಿಕ ಮಹತ್ವಾಕಾಂಕ್ಷೆ ಅಲ್ಲ, ಧ್ಯೇಯಕ್ಕಾಗಿ ಬದುಕಿದ್ದೇನೆ, ದೇಶದ ಜನತೆಗೆ ತಲೆಬಾಗುತ್ತೇನೆ’: ಆಡಳಿತದಲ್ಲಿ 25 ವರ್ಷ ಪೂರೈಸಿದ ಪ್ರಧಾನಿ ಮೋದಿ ಮಾತು; Video

ರಷ್ಯಾ ಕರಾವಳಿಯಲ್ಲಿ ಡ್ರೋನ್ ದಾಳಿ: ಹೊತ್ತಿ ಉರಿದ ತೈಲ ಟ್ಯಾಂಕರ್‌, 23 ಭಾರತೀಯ ಸಿಬ್ಬಂದಿ ಪಾರು..!

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video

‘ದಯವಿಟ್ಟು ಮಲಗಬೇಡಿ, ನಮಗೆ ನೀವು ಬೇಕು’: ಸಾವಿನ ದವಡೆಯಲ್ಲಿದ್ದ ಸ್ಮಿತ್ ಮಚ್ಚರ್'ಗೆ ಧೈರ್ಯ ತುಂಬಿದ ದಂತ ವೈದ್ಯ, Flydubai ವಿಮಾನದಲ್ಲಿ ಆ 45 ನಿಮಿಷಗಳಲ್ಲಿ ನಡೆದಿದ್ದೇನು..?