ದೇಶ

ಭ್ರಷ್ಟಾಚಾರ ಪ್ರಕರಣ: ಚರ್ಚಿಲ್ ಜಾಮೀನು ಅರ್ಜಿ ವಜಾ

Lingaraj Badiger

ಪಣಜಿ: ಲೂಯಿಸ್ ಬರ್ಗರ್ ಹಗರಣದ ಆರೋಪಿ ಗೋವಾ ಮಾಜಿ ಲೋಕೋಪಯೋಗಿ ಸಚಿವ ಚರ್ಚಿಲ್ ಅಲೆಮಾವೊ ಅವರ ಜಾಮೀನು ಅರ್ಜಿ ಸೋಮವಾರ ಸ್ಥಳೀಯ ನ್ಯಾಯಾಲಯ ವಜಾಗೊಳಿಸಿದೆ.

ಜಿಲ್ಲಾ ನ್ಯಾಯಾಧೀಶವ ಬಿ.ಪಿ.ದೇಶಪಾಂಡೆ ಅವರು ಕೊಲ್ವಾಲೆ ಜೈಲಿನಲ್ಲಿರುವ ಚರ್ಚಿಲ್ ಅವರ ಜಾಮೀನು ಅರ್ಜಿಯನ್ನು ವಜಾಗೊಳಿಸಿದ್ದಾರೆ.

ಅಮೆರಿಕದ ನ್ಯೂಜರ್ಸಿಯ ಲೂಯಿಸ್ ಕಂಪನಿ, ಬಹುಕೋಟಿ ಜಲಾಭಿವೃದ್ಧಿ ಯೋಜನೆಯ ಗುತ್ತಿಗೆ ಪಡೆಯಲು ಗೋವಾ ಮಾಜಿ ಮುಖ್ಯಮಂತ್ರಿ ದಿಗಂಬರ ಕಾಮತ್ ಹಾಗೂ ಮಾಜಿ ಸಚಿವ ಚರ್ಚಿಲ್ ಅಲೆಮಾವೋ ಅವರಿಗೆ 6 ಕೋಟಿ ರುಪಾಯಿ ಲಂಚ ನೀಡಲಾಗಿದೆ. ಈ ಸಂಬಂಧ ಚರ್ಚಿಲ್ ಅವರನ್ನು ಕಳೆದ ಆಗಸ್ಟ್ 6ರಂದು ಗೋವಾ ಪೊಲೀಸರು ಬಂಧಿಸಿದ್ದರು.

ಗೋವಾದಲ್ಲಿ ಕೇಂದ್ರ ಸರ್ಕಾರ ಜಪಾನ್ ಸರ್ಕಾರದೊಂದಿಗೆ ಜಂಟಿ ಯಾಗಿ ಆರಂಭಿಸಲು ಯೋಜಿಸಿದ್ದ ನೀರು ಸರಬರಾಜು ಮತ್ತು ಒಳಚರಂಡಿ ಅಭಿವೃದ್ಧಿ ಪಂಚವಾರ್ಷಿಕ ಯೋಜನೆಗಾ ಗಿ  ಟೆಂಡರ್ ಕರೆಯಲಾಗಿತ್ತು. ಅಮೆರಿಕದ ಕಂಪನಿ ಇದನ್ನು ಪಡೆದ ನಂತರ, ಲಂಚ ನೀಡುವ ಮೂಲಕ ಗುತ್ತಿಗೆ ಪಡೆದಿದ್ದಾರೆಂಬ ಆರೋಪವನ್ನು ಕಂಪನಿ ಅಧಿಕಾರಿಗಳು ಈಗಾಗಲೇ ಒಪ್ಪಿಕೊಂಡಿದ್ದಾರೆ

SCROLL FOR NEXT