ಶ್ರೀನಗರ: ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ರಂತೆ ಕಾಶ್ಮೀರದ ಸಮಸ್ಯೆಗಾಗಿ ಉಗ್ರರು ತಮ್ಮ ಜೀವದ ಹಂಗು ತೊರೆದು ಹೋರಾಟ ನಡೆಸುತ್ತಿದ್ದಾರೆ ಎಂದು ಪ್ರತ್ಯೇಕತಾವಾದಿ ಶಬೀರ್ ಶಾ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ದೆಹಲಿಯಿಂದ ಶ್ರೀನಗರ ತಲುಪಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಬೀರ್ ಶಾ ಕಾಶ್ಮೀರ ಚಳುವಲಿಗೆ ಉಗ್ರರು ಅಭೂತಪೂರ್ವ ಬೆಂಬಲ ನೀಡುತ್ತಿದ್ದಾರೆ ಎಂದು ಹೇಳಿದರು. ಇನ್ನೂ ಕಾಶ್ಮೀರ ಪ್ರತ್ಯೇಕತೆ ವಿಷಯವಾಗಿ ಚರ್ಚಿಸಲು ಪಾಕಿಸ್ತಾನ ಯಾವಾಗಲೂ ಬಾಗಿಲು ತೆರೆದಿರುತ್ತದೆ ಎಂದು ತಿಳಿಸಿದ್ದಾರೆ.
ಭಗತ್ ಸಿಂಗ್ ಅವರನ್ನು ಸ್ಮರಿಸುವಂತೆಯೇ ಕಾಶ್ಮೀರಿ ಉಗ್ರರನ್ನು ಸ್ಮರಿಸಲಾಗುತ್ತದೆ ಎಂದು ಹೇಳಿದ ಶಬೀರ್ ಶಾ, ಕಡ್ಡಾಯವಾಗಿ ಭಾರತ- ಪಾಕ್ ಮಾತುಕತೆ ನಡೆಸಬೇಕೆಂದು ಆಗ್ರಹಿಸಿದ್ದಾರೆ.