ಸಂಜಯ್ ದತ್ ಹಾಗೂ ಪ್ರಿಯಾ ದತ್ (ಸಂಗ್ರಹ ಚಿತ್ರ) 
ದೇಶ

ಮತ್ತೆ 30 ದಿನ ಪೆರೋಲ್ ಪಡೆದ ಸಂಜಯ್ ದತ್

ಬಾಲಿವುಡ್ ನಟ ಹಾಗೂ ಮುಂಬೈ ಸರಣಿ ಸ್ಫೋಟದ ಅಪರಾಧಿ ಸಂಜಯ್ ದತ್ ಅವರಿಗೆ ಮಹಾರಾಷ್ಟ್ರ ಸರ್ಕಾರ ಮತ್ತೆ 30 ದಿನಗಳ ಕಾಲ ಪೆರೋಲ್ ನೀಡಿದೆ.

ಮುಂಬೈ: ಬಾಲಿವುಡ್ ನಟ ಹಾಗೂ ಮುಂಬೈ ಸರಣಿ ಸ್ಫೋಟದ ಅಪರಾಧಿ ಸಂಜಯ್ ದತ್ ಅವರಿಗೆ ಮಹಾರಾಷ್ಟ್ರ ಸರ್ಕಾರ ಮತ್ತೆ 30 ದಿನಗಳ ಕಾಲ ಪೆರೋಲ್ ನೀಡಿದೆ.

ತಮ್ಮ ಮಗಳ ಅನಾರೋಗ್ಯದ ಹಿನ್ನೆಲೆಯಲ್ಲಿ ಪೆರೋಲ್ ಕೋರಿ ಕಳೆದ ಜೂನ್‌ನಲ್ಲಿ ಸಂಜಯ್ ದತ್ ಅರ್ಜಿ ಸಲ್ಲಿಸಿದ್ದರು. ಇದು ಮಾಧ್ಯಮಗಳಲ್ಲಿ ತೀವ್ರ ಚರ್ಚೆಗೆ ಕಾರಣವಾಗಿತ್ತು. ಅಲ್ಲದೆ ಬಾಲಿವುಡ್ ನಟನಿಗೆ ವಿಶೇಷ ಆತಿಥ್ಯ ನೀಡಲಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿದ್ದವು.

ಎಎನ್‌ಐ ವರದಿಯ ಪ್ರಕಾರ, ಸಂಜಯ್ ತಮ್ಮ ಪುತ್ರಿ ಮೂಗಿನ ಶಸ್ತ್ರ ಚಿಕಿತ್ಸೆಗೆ ಒಳಗಾಗುತ್ತಿರುವ ಹಿನ್ನೆಲೆಯಲ್ಲಿ ಅವರಿಗೆ ಪೆರೋಲ್ ಮಂಜೂರು ಮಾಡಲಾಗಿದೆ. ಎರಡು ದಿನಗಳ ಹಿಂದೆಯೇ ಪುಣೆ ವಿಭಾಗೀಯ ಆಯುಕ್ತರು ಪೆರೋಲ್‌ಗೆ ಅನುಮತಿ ನೀಡಿದ್ದು, ಒಂದೇರಡು ದಿನಗಳಲ್ಲೇ ದತ್ ಜೈಲಿನಿಂದ ಮನಗೆ ತೆರಳಲಿದ್ದಾರೆ.

ಸಂಜಯ್ ದತ್ ಅವರು ಜೈಲು ಶಿಕ್ಷೆಗೆ ಒಳಗಾದ ನಂತರ ಇದುವವರೆಗೆ ಒಟ್ಟು 146 ದಿನ ಜೈಲಿನಿಂದ ಹೊರಗಿದ್ದಾರೆ. ಕಳೆದ ಜನವರಿ 2014ರಲ್ಲಿ 30 ದಿನಗಳ ಪೆರೋಲ್ ಪಡೆದಿದ್ದ ದತ್ ಅದನ್ನು ಮತ್ತೆ 60 ದಿನಗಳವರೆಗೆ ವಿಸ್ತರಿಸಿಕೊಂಡಿದ್ದರು. ಬಳಿಕ ಮತ್ತೆ ಡಿಸೆಂಬರ್‌ನಲ್ಲಿ 14 ದಿನಗಳ ಪೆರೋಲ್ ಪಡೆದಿದ್ದರು. ಅಲ್ಲದೆ ಮತ್ತೆ ವಿಸ್ತರಿಸುವಂತೆ ಕೋರಿದ್ದರು. ಆದರೆ ಇದಕ್ಕೆ ಮಾಧ್ಯಮಗಳಲ್ಲಿ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಮಹಾ ಸರ್ಕಾರ ಪೆರೋಲ್ ವಿಸ್ತರಿಸಲು ನಿರಾಕರಿಸಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: MI vs RCB; ಫಿಲ್ ಸಾಲ್ಟ್, ಕೊಹ್ಲಿ, ಪಾಟಿದಾರ್ ಭರ್ಜರಿ ಬ್ಯಾಟಿಂಗ್, ಮುಂಬೈಗೆ ಗೆಲ್ಲಲು 241 ರನ್ ಬೃಹತ್ ಗುರಿ!

ಅತ್ಯಂತ ಸುಂದರ 'ಮದುವೆ ಹೆಣ್ಣು', 1 ಬಿಲಿಯನ್ ಡಾಲರ್ ಹಣ ಕೊಡಿ: Uganda ಸೇನಾ ಮುಖ್ಯಸ್ಥನ ವಿಚಿತ್ರ ಬೇಡಿಕೆ; Turkey ಬೇಸ್ತು!

IPL 2026: MI vs RCB; ವಾಂಖೆಡೆ ಕ್ರೀಡಾಂಗಣದಲ್ಲಿ ಇತಿಹಾಸ ಬರೆದ ಬೆಂಗಳೂರು, ಅತ್ಯಧಿಕ ಮೊತ್ತ!

ನೀವೇನ್ ಮುಚ್ಚೋದು.. ನಾವೇ ಬಂದ್ ಮಾಡ್ತೀವಿ: Hormuz ಜಲಸಂಧಿ ದಾಟುವ ಹಡಗುಗಳಿಗೆ US ನೌಕಾಪಡೆ ತಡೆ; ಇರಾನ್ ಗೆ ಟ್ರಂಪ್ ಶಾಕ್!

SCROLL FOR NEXT