ಭುವನೇಶ್ವರ: ಗಸ್ತು ತಿರುಗುತ್ತಿದ್ದ ಗಡಿ ರಕ್ಷಣಾ ಪಡೆ(ಬಿಎಸ್‌ಎಫ್) ಮೇಲೆ ಬುಧವಾರ ನಕ್ಸಲರು ದಾಳಿ ನಡೆಸಿದ್ದು, ದಾಳಿಯಲ್ಲಿ ಮೂವರು ಯೋಧರ ಮೃತಪಟ್ಟಿದ್ದು, ಆರು ಯೋಧರು ಗಾಯಗೊಂಡಿದ್ದಾರೆ.
ವರದಿಗಳ ಪ್ರಕಾರ, ಚಿತ್ರಕೊಂಡದ ಸುಕ್ಮಾ-ಮಲ್ಕನಗಿರಿ ಗಡಿಯಲ್ಲಿ ಈ ಘಟನೆ ನಡೆದಿದ್ದು, ನಿರ್ಮಾಣ ಹಂತದ ಬ್ರಿಡ್ಜ್‌ಗೆ ರಕ್ಷಣೆ ಒದಗಿಸುತ್ತಿದ್ದ ಬಿಎಸ್‌ಎಫ್ ಯೋಧರ ಮೇಲೆ ನಕ್ಸಲರು ದಾಳಿ ಮಾಡಿದ್ದಾರೆ.
ಬಿಎಸ್‌ಎಫ್ ಮಹಾ ನಿರ್ದೇಶಕ ಡಿ.ಕೆ.ಪಾಠಕ್ ಅವರು ಸ್ಥಳಕ್ಕೆ ಆಗಮಿಸುತ್ತಿದ್ದಾರೆ ಎಂದು ಎಎನ್‌ಐ ವರದಿ ಮಾಡಿದೆ.