ದೇಶ

ಕಿಟ್ಟಿ ಪಾರ್ಟಿ ಥೀಮ್ ಆದ ರಾಧೆ ಮಾ ವಿವಾದ

Vishwanath S
ನವದೆಹಲಿ: ವರದಕ್ಷಿಣೆ ಕಿರುಕುಳ ಹಾಗೂ ಮಿನಿ ಸ್ಕರ್ಟ್ ತೊಡುವ ಮೂಲಕ ವಿವಾದದ ಕೇಂದ್ರ ಬಿಂದುವಾದ ಸ್ವಯಂಘೋಷಿತ ವಿವಾದಿತ ದೇವ ಮಹಿಳೆ ರಾಧೆ ಮಾ ವಿವಾದ ಇದೀಗ ಕಿಟ್ಟಿ ಪಾರ್ಟಿ ಥೀಮ್ ಆಗಿ ಬದಲಾಗಿದೆ. 
ಹಲವು ವಿವಾದಗಳ ಬಳಿಕವೂ ತನ್ನ ಭಕ್ತರನ್ನು ಮೇಲೆ ಪ್ರಭಾವ ಬೀರುತ್ತಿದ್ದಾರೆ. ಅದು ಬೇರೆಯೇ ರೀತಿಯಲ್ಲಿ.
ರಾಧೆ ಮಾ ವಿವಾದ ಇದೀಗ ಕಿಟ್ಟಿ ಪಾರ್ಟಿ ಥೀಮ್ ಆಗಿದ್ದು, ಇದೇ ಸಮಾರಂಭದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಹರಿದಾಡುತ್ತಿದೆ. 
ಟ್ವೀಟರ್ ನಲ್ಲಿ ಹರಿದಾಡುತ್ತಿರುವ ಫೋಟೋದಲ್ಲಿ ಮಹಿಳೆಯ ಗುಂಪೊಂದು ರೆಡ್ ಡ್ರಸ್ ಧರಿಸಿ, ಕೈಯಲ್ಲಿ ತ್ರಿಶೂಲ ಹಿಡಿದು ಸಂಭ್ರಮಿಸುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ಅವರ ವಿರುದ್ಧ ಜೋಕ್ ಗಳು ಹರಿದಾಡುತ್ತಿವೆ. 
SCROLL FOR NEXT