ದೇಶ

ಉತ್ತರ ಪ್ರದೇಶದಲ್ಲಿ 24 ಗಂಟೆ ವಿದ್ಯುತ್ ಪೂರೈಕೆಗೆ 2019 ವರೆಗೆ ಕಾಯಬೇಕು!

Srinivas Rao BV
ಲಖನೌ: ಉತ್ತರ ಪ್ರದೇಶ ಸರ್ಕಾರ ರಾಜ್ಯದ ಜನತೆಗೆ ದಿನದ 24 ಗಂಟೆಯೂ ವಿದ್ಯುತ್ ಪೂರೈಸಲಿದೆಯಂತೆ, ಆದರೆ ಇದಕ್ಕಾಗಿ 2019 ವರೆಗೆ ಕಾಯಬೇಕು. 
2019 ರ ನಂತರ ರಾಜ್ಯಾದ್ಯಂತ 24 ಗಂಟೆಯೂ ವಿದ್ಯುತ್ ಪೂರೈಕೆಯಾಗಲಿದೆ ಎಂದು 
ಇಂಧನ ಸಚಿವ ಯಾಸಿರ್ ಷಾ ಹೇಳಿದ್ದಾರೆ. ನಗರ ಪ್ರದೇಶದಲ್ಲಿ 24 ಗಂಟೆ ವಿದ್ಯುತ್ ಪೂರೈಕೆ ಮಾಡಲು ನಿರ್ಧರಿಸಲಾಗಿದೆ. 22 ಗಂಟೆ ಜಿಲ್ಲಾ ಕೇಂದ್ರಗಳಿಗೆ ಹಾಗೂ 16 ಗಂಟೆ ಗ್ರಾಮಾಂತರ ಪ್ರದೇಶಗಳಿಗೆ ವಿದ್ಯುತ್ ಪೂರೈಕೆ ಮಾಡಲು ಸರ್ಕಾರ ಯೋಜನೆ ರೂಪಿಸಿದೆ ಎಂದು ಷಾ ತಿಳಿಸಿದ್ದಾರೆ. 
ಪಸ್ತುತ ತಾಜ್ ತರ್ಪೇಜಿಯಂ ಜೋನ್ ಹಾಗೂ ಕೈಗಾರಿಕಾ ಪ್ರದೇಶಗಳಿಗೆ 20 ಗಂಟೆಗಳ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ. ಜಿಲ್ಲಾ ಕೇಂದ್ರ ಹಾಗೂ ಬುಂದೇಲ್ ಖಂಡ್ ಪ್ರದೇಶಕ್ಕೆ 15 ಗಂಟೆಗೆಳ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ.
SCROLL FOR NEXT