ನವದೆಹಲಿ: ಎನ್‍ಡಿಎ ಸರ್ಕಾರದ ಮಹತ್ವಾಕಾಂಕ್ಷಿ ಸ್ಮಾರ್ಟ್ ಸಿಟಿ ಯೋಜನೆಗೆ ಆಯ್ಕೆಯಾಗಿರುವ ದೇಶದ ನಗರಗಳ ಅಧಿಕೃತ ಪಟ್ಟಿ ಗುರುವಾರ ಬಿಡುಗಡೆಯಾಗಲಿದೆ.
ಜಮ್ಮುಕಾಶ್ಮೀರ ಹೊರತು ಪಡಿಸಿ ದೇಶದ ಇತರ ಎಲ್ಲಾ ರಾಜ್ಯಗಳೂ ಸ್ಮಾರ್ಟ್ ಯೋಜನೆಗೆ ತಮ್ಮ ಪ್ರಸ್ತಾವನೆಗಳನ್ನು ಕೇಂದ್ರದ ನಿರ್ದೇಶನದಂತೆ ಅಂತಿಮಗೊಳಿಸಿವೆ. ಕೇಂದ್ರ ನಗರಾಭಿವೃದ್ಧಿ ಸಚಿವಾಲಯ ಯೋಜನೆಗೆ ಅಂತಿಮಗೊಂಡಿರುವ 99 ನಗರಗಳ ಪಟ್ಟಿ ಪ್ರಕಟಿಸಲಿದೆ ಎಂದು ಮೂಲಗಳು ತಿಳಿಸಿವೆ.
48,000 ಕೋಟಿ ಅನುದಾನದ ಯೋಜನೆಗೆ ಕರ್ನಾಟಕದ ಶಿವಮೊಗ್ಗ, ಬಿಹಾರದ ಬಿಹಾರ್ ಷರೀಫ್, ಉ.ಪ್ರದೇಶದ ಮೊರಾದ ಬಾದ್, ಸಹರಾನ್ ಪುರ್ ಸೇರಿ ಚಿಕ್ಕ ನಗರಗಳೂ ಆಯ್ಕೆ ಯಾಗಿದ್ದು, ಸ್ಪಷ್ಟ ಚಿತ್ರಣ ಗುರುವಾರ ಸಿಗಲಿದೆ.