ದೇಶ

ಶೀನಾ ಬೋರಾ ಹತ್ಯೆ ಪ್ರಕರಣ: ಮೈಕೆಲ್, ಸಂಜೀವ್ ಖನ್ನಾ ಶುಕ್ರವಾರ ವಿಚಾರಣೆ

Sumana Upadhyaya

ಮುಂಬೈ: ಶೀನಾ ಬೋರಾ ಹತ್ಯೆ ರಹಸ್ಯ ಪ್ರಕರಣದಲ್ಲಿ ಶುಕ್ರವಾರ ಮತ್ತಷ್ಟು ಕುತೂಹಲಕಾರಿ ಅಂಶಗಳು ಹೊರಬೀಳುವ ನಿರೀಕ್ಷೆಯಿದ್ದು, ಆಕೆಯ ಸಹೋದರ ಮೈಕೆಲ್ ಗುವಾಹಟಿಯಿಂದ ಮುಂಬೈಗೆ ಆಗಮಿಸಲಿದ್ದು, ಪೊಲೀಸರು ಆತನನ್ನು ವಿಚಾರಣೆ ನಡೆಸುವ ಸಾಧ್ಯತೆಯಿದೆ.

ಶೀನಾ ತಾಯಿ ಇಂದ್ರಾಣಿ ಮುಖರ್ಜಿ, ಆಕೆಯ ಪತಿ ಪೀಟರ್ ಮುಖರ್ಜಿ ಮತ್ತು ಮಾಜಿ ಪತಿ  ಸಂಜೀವ್ ಖನ್ನಾನನ್ನೂ ಕೂಡ ಮುಂಬೈ ನ್ಯಾಯಾಲಯದ ಮುಂದೆ ಇಂದು ವಿಚಾರಣೆಗೆ ಹಾಜರುಪಡಿಸುವ ಸಾಧ್ಯತೆಯಿದೆ.

ಶೀನಾ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನ್ನ  ಬಳಿ ಸಾಕ್ಷ್ಯಾಧಾರಗಳಿವೆ ಎಂದು ಮೈಕೆಲ್ ಮಾಧ್ಯಮದ ಮುಂದೆ ಹೇಳಿದ್ದ. ಆತ ಈಗ ತನ್ನ ಅಜ್ಜಿ-ತಾತರೊಂ ದಿಗೆ ವಾಸಿಸುತ್ತಿರುವ ಗುವಾಹಟಿಯ ಮನೆ ಮುಂದೆ ನಿನ್ನೆ ಮಾಧ್ಯಮದವರ ಮುಂದೆ ಮಾತನಾಡಿ, ಆರೋಪಿಗಳು ತನ್ನನ್ನೂ ಮುಂದಿನ ಗುರಿಯಾಗಿಟ್ಟುಕೊಂಡಿರಬಹುದು ಎಂದು ಆತಂಕ ವ್ಯಕ್ತಪಡಿಸಿದ್ದ.
ಮುಂಬೈ ಪೊಲೀಸರ ತಂಡವೊಂದು ಗುವಾಹಟಿಗೆ ತೆರಳಿ ಶೀನಾ ಸಹೋದರ ಮೈಕೆಲ್ ನಿಂದ ಮಾಹಿತಿ ಪಡೆಯಿತು.

ನಿನ್ನೆ ಮುಂಬೈನ ಉಪ ನಗರ ಖಾರ್ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಆಯುಕ್ತ ರಾಕೇಶ್ ಮರಿಯಾ ಇಂದ್ರಾಣಿ, ಆಕೆಯ ಕಾರು ಚಾಲಕ ಮತ್ತು ಮಲಪುತ್ರ ರಾಹುಲ್ ಮುಖರ್ಜಿಯನ್ನು ತೀವ್ರ ವಿಚಾರಣೆ ನಡೆಸಿದರು.

ನಂತರ ಮಾಧ್ಯಮಕ್ಕೆ ಮಾಹಿತಿ ನೀಡಿದ ರಾಕೇಶ್ ಮರಿಯಾ, ಶೀನಾ ಕೊಲೆಗೆ ಪ್ರಮುಖ ಕಾರಣಗಳು ಗೊತ್ತಾಗಿದೆ. ಆದರೆ ಪ್ರಕರಣದ ಮೂರನೇ ಆರೋಪಿ ಸಂಜೀವ್ ಖನ್ನಾನನ್ನು ವಿಚಾರಣೆ ನಡೆಸಬೇಕಿದೆ ಎಂದು ಹೇಳಿದ್ದಾರೆ. ಆತನನ್ನು ವಿಚಾರಣೆ ನಡೆಸಿದ ನಂತರವಷ್ಟೇ ಶೀನಾ ಕೊಲೆಗೆ ಪ್ರಮುಖ ಪ್ರೇರಣೆಯೇನೆಂಬುದನ್ನು ಹೇಳಬಹುದು ಎಂದು ತಿಳಿಸಿದ್ದಾರೆ.

SCROLL FOR NEXT